ವಿಟ್ಲ: ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ವಿಟ್ಲ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ
ವಿಟ್ಲ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MGNREGA) ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಬದಲಿಸಿರುವುದನ್ನು ಖಂಡಿಸಿ, ಎ.ಐ.ಸಿ.ಸಿ ಯ ಸೂಚನೆ ಮೇರೆಗೆ ಹಾಗೂ ಕೆಪಿಸಿಸಿಯ ನಿರ್ದೇಶನದ ಮೇರೆಗೆ ಕುಡಿಪ್ಪಾಡಿ ವಲಯ ಕಾಂಗ್ರೆಸ್ ವ್ಯಾಪ್ತಿಯಲ್ಲಿ ‘ನರೇಗ ಬಜಾವ್ ಸಂಗ್ರಾಮ್’ ಕುರಿತು ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ರವರ ನೇತೃತ್ವದಲ್ಲಿ ಕುಡಿಪ್ಪಾಡಿ ವಲಯ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಅಬ್ದುಲ್ ರಹಿಮಾನ್(ಹಸೈನಾರ್ ನೆಲ್ಲಿಗುಡ್ಡೆ) ಕುಡಿಪ್ಪಾಡಿ, ವಲಯ ಅಧ್ಯಕ್ಷರಾದ ಕೇಶವ ಪೆಲತ್ತಡಿ, ಬೂತ್1/2 ಅಧ್ಯಕ್ಷಗಳು ಇಬ್ರಾಹಿಂ ಕಲ್ಲಂದಡ್ಕ, ಆನಂದ ಎ ಅರ್ಕ, ಕಾಂಗ್ರೆಸ್ ಮುಖಂಡರಾದ ಸುಬ್ರಮಣ್ಯ ಗೌಡ ಹನಿಯೂರು, ಧೀರಜ್ ಗೌಡ, ಲತೀಫ್ ಡೆಂಬಳೆ, ಹುಸೇನರ್ ಖಂಡಿಗ, ಕರೀಂ ಅನಾಜೆ, ಹಂಝ ಖಂಡಿಗ, ಉಮ್ಮರ್ ಮಾರಾಗುರಿ, ಅಬೂಬಕರ್ ಕಲಂಬಿ, ಪೂವಪ್ಪ ಕುದ್ದುಮನು ಹಾಗೂ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.




