ಬೇಕೂರು: ಆವಳ ಅಮ್ಮುಞಿ ಉಪ್ಪಾಪ ಕುಟುಂಬ ಸಂಗಮ: 8 ಕುಟುಂಬಗಳ 7 ತಲೆಮಾರಿನ 1500 ಸದಸ್ಯರು ಭಾಗೀ
ದಿನಾಂಕ 26-01-2026 ರಂದು ಕಾಸರಗೋಡು ಜಿಲ್ಲೆಯ ಬೇಕೂರ್‌ನ ಸಿ ಪ್ಯಾಲೇಸ್ ಹಾಲ್ ನಲ್ಲಿ ಅಮ್ಮುಞಿ ಉಪ್ಪಾಪ ಕುಟುಂಬ ಸಂಗಮವು ಬಹಳ ಅದ್ದೂರಿಯಾಗಿ ನಡೆದವು. ಸುಮಾರು 7–8 ತಿಂಗಳ ಹಿಂದೆ ಯೂಸುಫ್ ಹಾಜಿ ಕೆದುಂಬಾಡಿ ಅವರ ನೇತೃತ್ವದಲ್ಲಿ ವಾಟ್ಸಪ್ ಗುಂಪಿನ ಮೂಲಕ ಆರಂಭವಾದ ಈ ಕುಟುಂಬ ಸಂಘಟನೆಯಲ್ಲಿ 8 ಕುಟುಂಬಗಳ 7 ತಲೆಮಾರಿನ ಸುಮಾರು 1500ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೂಸುಫ್ ಹಾಜಿ ಕೆದುಂಬಾಡಿ ವಹಿಸಿದ್ದರು. ಇಬ್ರಾಹಿಂ ಸಖಾಫಿ ಪುಂಡೂರ್ ಉಸ್ತಾದರ ದುವಾದೊಂದಿಗೆ ಕಾರ್ಯಕ್ರಮ ಆರಂಭವಾಗಿ, ಮೊಹಮ್ಮದ್ ಹಾಜಿ ಮಾಸ್ಟರ್ ಚೇರಾಲ್ ಅವರು ಉದ್ಘಾಟನೆ ನೆರವೇರಿಸಿದರು.ಹಫೀಝ್ ಶೊಹೖಬ್ ಸಖಾಫಿ ಖಿರಾಅತ್ ಪಠಿಸಿದರು.ಯೂಸುಫ್ ಹಾಜಿ ಆವಳ ಅವರು ಸ್ವಾಗತ ಭಾಷಣ ಮಾಡಿದರು. ಮೊಹಮ್ಮದ್ ಕುಂಞಿ ಸಖಾಫಿ ಆವಳ ಅವರ ದೀನಿ ಸಂದೇಶ, ಇಸ್ಮಾಯಿಲ್ ಕುಕ್ಕಾಜೆ ಅವರ ಪ್ರೇರಣಾತ್ಮಕ ಮಾತುಗಳು, ವಕೀಲ ಹಮೀದ್ ಅಶ್ರಫ್ ಅವರ ಕುಟುಂಬ ಅಭಿವೃದ್ಧಿ ಕುರಿತ ಮಾತುಗಳು ಎಲ್ಲರ ಗಮನ ಸೆಳೆದವು.
ಆವಳ ಅಬ್ದುಲ್ಲ ಕುಂಞಿ ಹಾಜಿ ಕುಟುಂಬ ಪರಿಚಯ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕ್ವಿಜ್, ಮಕ್ಕಳ ಸ್ಪರ್ಧೆಗಳು ಹಾಗೂ ವಿವಿಧ ಕಾರ್ಯಕ್ರಮಗಳು ನಡೆದವು. ಮಕ್ಕಳ ಕಾರ್ಯಕ್ರಮಗಳನ್ನು ಡಾಕ್ಟರ್
ರಹಮತ್ ಇರ್ಶಾನ ನಡೆಸಿಕೊಟ್ಟರು.ಯುವ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. 8 ಕುಟುಂಬದ ಸದಸ್ಯರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು ಹಾಗೂ ಯೂಸುಫ್ ಹಾಜಿ ಕೆದುಂಬಾಡಿ ಅವರನ್ನು ವಿಶೇಷವಾಗಿ ಗೌರವಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ನಿವೃತ್ತ ಪ್ರಾಂಶುಪಾಲರು ಬದ್ರಿಯಾ ಕಾಲೇಜ್ ಯೂಸುಫ್ ಹಾಜಿ ಆವಳ ವಹಿಸಿದ್ದು, ಎಂಜಿನಿಯರ್ ಸಾಹುಲ್ ಹಮೀದ್ ಹಾಜಿ ಧನ್ಯವಾದ ಸಮರ್ಪಿಸಿದರು. ದ.ಕ ಜಿಲ್ಲಾ ಗ್ರಾಮಾಂತರ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಅಲಿ ಪುತ್ತೂರು ಭಾಗವಹಿಸಿದರು.ಕನ್ಯಾನ ಹಸೈನಾರ್ ಹಾಜಿ ಅವರ ನೇತೃತ್ವದಲ್ಲಿ ರುಚಿಕರ ಭೋಜನ ವ್ಯವಸ್ಥೆಯೊಂದಿಗೆ ಕುಟುಂಬ ಸಂಗಮ ಯಶಸ್ವಿಯಾಗಿ ಸಮಾಪ್ತಿಗೊಂಡಿತು.




