ವಿಟ್ಲ ಪಟ್ಟಣ ಪಂಚಾಯತ್ ನ ಜಾತ್ರಾ ಸಂತೆ ಏಲಂನಲ್ಲಿ ಭಾರೀ ಅವ್ಯವಹಾರ ಆರೋಪ: ಧಮ್ಕಿ ಹಾಕಿ ಹೆಚ್ಚುವರಿ ಹಣ ವಸೂಲಿ; ಟೆಂಡರ್ ದಾರ ಮಹೇಶ್ ದಾಸ್ ವಿರುದ್ದ ದೂರು
ವಿಟ್ಲ: ಶ್ರೀ ಪಂಚಲಿಂಗೆಶ್ವರ ದೇವರ ಜಾತ್ರೆಗೆ ಡಿ.22ಕ್ಕೆ ಸಂತೆ ಹಾಕಲು ಟೆಂಡರ್ ಕರೆದ ಪ್ರಕಾರ ಅದರಲ್ಲಿ ಮಹೇಶ್ ದಾಸ್ ಎಂಬವರು ವಿಜಯಶಾಲಿಯಾಗಿರುತ್ತಾರೆ. ಟೆಂಡರ್ ವಿಜಯಶಾಲಿಯಾದ ಮಹೇಶ್ ದಾಸ್ ಎಂಬುವವನು ದೊಡ್ಡ ಮಟ್ಟದಲ್ಲಿ ಅವ್ಯವಹಾರ ಮತ್ತು ಮೋಸ ಮಾಡಿರುವುದಾಗಿ ಬೆಳ್ತಂಗಡಿ ತಾಲೂಕಿನ , ಕುತ್ಕಾಡಿಯ ನಿವಾಸಿ ಲಕ್ಷೀಶ ಇವರು ವಿಟ್ಲ ಪಟ್ಟಣ ಪಂಚಾಯತ್ ಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಟೆಂಡರ್ ನಲ್ಲಿ ನಿಗದಿಯಾದ ಪ್ರಕಾರ 10,000 ರೂ . ಬಾಡಿಗೆ, 1800 gst ಹಾಗೂ ಟೆಂಡರ್ ಮೊತ್ತ ನಿಗದಿ ಪಡಿಸಿದ 1900 ರೂಪಾಯಿಗಳನ್ನು 10feet ಗೆ ನಿಗದಿಪಡಿಸಲಾಗಿತ್ತು ಅಂದರೆ ಒಟ್ಟು ಮೊತ್ತ 10feet ಗೆ 13, 700ರೂಪಾಯಿಗಳು.
ಆದರೆ ಮಹೇಶ್ ದಾಸ್ ಬಡ ವ್ಯಾಪಾರಸ್ಥರಿಂದ ಬೃಹತ್ ಮಟ್ಟದಲ್ಲಿ ಹೆಚ್ಚುವರಿಯಾಗಿ ಹಣ ಪಡೆದಿರುತ್ತಾನೆ 20feetಗೆ 27,400 ರೂಪಾಯಿಯ ಬದಲು 35000 ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಹಾಗೆ 10feet ಅಂಗಡಿಗೆ ಮತ್ತು 15feet ಅಂಗಡಿಗೆ 10feetನ ರಶೀದಿ ನೀಡಿ, ಧಮ್ಕಿ ಹಾಕಿ ಹೆಚ್ಚುವರಿ ಮೊತ್ತ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ಹಾಗೂ ನನ್ನ ಅಣ್ಣ (ನವನೀತ್)ನಿಂದ 20feet ಅಂಗಡಿಗೆ ಬರೋಬ್ಬರಿ 35000 ಧಮ್ಕಿ ಹಾಕಿ ಪಡೆದಿದ್ದಾನೆ, ಅಂದರೆ ಬರೋಬ್ಬರಿ 7600ರೂಪಾಯಿಗಳನ್ನು ಹೆಚ್ಚುವರಿಯಾಗಿ ಕಿತ್ತುಕೊಂಡಿದ್ದಾನೆ. ಪಂಚಾಯತ್ ಸಿಬ್ಬಂದಿಗಳೇ ಅಳತೆ ಮಾಡಿರುವ ಪ್ರಕಾರ ನನ್ನ ಮತ್ತು ನನ್ನ ಅಣ್ಣನ ಅಂಗಡಿ ಸರಿಯಾಗಿ 20feet ಇರುತ್ತದೆ ಹಾಗಾಗಿ ಪಂಚಾಯತ್ ನಿಗದಿಪಡಿಸಿದ ಪ್ರಕಾರ ನಮಗೆ 27400 ರೂಪಾಯಿಗಳು ಮಾತ್ರ ಆಗಬೇಕಿತ್ತು.
ಟೆಂಡರ್ ನಿಯಮದ ಪ್ರಕಾರ ಹೆಚ್ಚುವರಿಯಾಗಿ ಪಡೆಯುವುದು ಅಪರಾಧ ಎಂದು ಪಂಚಾಯತ್ ಅಧಿಕಾರಿಗಳು ಹೇಳಿದ್ದರು, ಈತ ರೌಡಿಸಂ ಮಾಡಿ ಬಡ ವ್ಯಾಪಾರಸ್ಥರಿಂದ ಹಣ ಕಿತ್ತುಕೊಂಡ ಎಂದು ದೂರಿನಲ್ಲಿ ತಿಳಿಸಿದ್ದಾರೆ




