January 31, 2026

ಚಿರಾಂತನ  ಚಾರಿಟೇಬಲ್ ಟ್ರಸ್ಟ್ ಉಕ್ಕುಡ ಇದರ ನೂತನ ವಾಗಿ ನಿರ್ಮಾಣಗೊಳ್ಳುತ್ತಿರುವ   ವೃದ್ಧಾಶ್ರಮ  ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ  ಮಂಜೂರುಗೊಂಡ  10 ಲಕ್ಷ ಮೊತ್ತದ ಅನುದಾನದ  ಮಂಜೂರಾತಿ ಪತ್ರ ಹಸ್ತಾಂತರ.

0
image_editor_output_image-1191010387-1769677952087

ವಿಟ್ಲ:  ಚಿರಾಂತನ  ಚಾರಿಟೇಬಲ್ ಟ್ರಸ್ಟ್ ಉಕ್ಕುಡ ಇದರ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವೃದ್ರಾಶ್ರಮ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ  ರೂಪಾಯಿ   10  ಲಕ್ಷ ಮೊತ್ತದ ಅನುದಾನದ ಮಂಜೂರಾಗಿದ್ದು, ಇದರ ಮಂಜೂರಾತಿ ಪತ್ರ  ಹಸ್ತಾಂತರ  ಜನವರಿ 29 ಗುರುವಾರ ಮಾಡಲಾಯಿತು.

ಮಂಜೂರಾತಿ ಪತ್ರವನ್ನು ವಿಟ್ಲ ಜೈನ ಬಸದಿ ಅಧ್ಯಕ್ಷರಾದ ಜೇತೇಶ್ ಜೈನ್ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ  ಚಿರಂತನ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ತೇಜಸ್ವಿ ಶಂಕರ್ ಜೂನಿಯರ್, ವಿಟ್ಲ ವಲಯದ ಜನಜಾಗೃತಿ ಅಧ್ಯಕ್ಷರಾದ ಕೃಷ್ಣಾಯ್ಯ ಬಳ್ಳಾಳ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ್, ಜೈನ ಬಸದಿಯ ದರ್ಶನ ಜೈನ್,  ಜನಜಾಗೃತಿ ಮಾಜಿ ಅಧ್ಯಕ್ಷರುಗಳಾದ ಕಿರಣ್ ಹೆಗ್ಡೆ, ಬಾಲಕೃಷ್ಣ ಆಳ್ವ, ಕೆಯ್ಯುರ್ ನಾರಾಯಣ ಭಟ್,  ಜನಜಾಗೃತಿ ಸದಸ್ಯರಾದ ನಟೇಶ್ ವಿಟ್ಲ, ಕೇಪು ವಲಯದ ಜನಜಾಗೃತಿ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಪೆರ್ನೆ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷರು ರೋಹಿತಾಕ್ಷ ಬಾಣಬೆಟ್ಟು, ಒಕ್ಕೂಟಗಳ ವಲಯಧ್ಯಕ್ಷರಾದ ಶ್ರೀಮತಿ ಪ್ರಮೀಳಾ, ರಾಜೇಂದ್ರ ರೈ, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಅಧ್ಯಕ್ಷರಾದ ಸುದರ್ಶನ್ ಪಡಿಯಾರ್,  ವಿಟ್ಲ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ವಿಟ್ಲ ತಾಲೂಕು  ಯೋಜನಾಧಿಕಾರಿ ಸುರೇಶ ಗೌಡ,  ಒಕ್ಕೂಟದ ಅಧ್ಯಕ್ಷರುಗಾಳದ  ಶ್ರೀಮತಿ ಸೀತಾಲಕ್ಷ್ಮಿ, ವಿಶ್ವನಾಥ್, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಶೌರ್ಯ ವಿಪತ್ತು ನಿರ್ವಹಣ ಘಟಕದ  ಸದಸ್ಯರು, ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.


ವಲಯದ ಮೇಲ್ವಿಚಾರಕರಾದ ಜಗದೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.ಚಿರಂತನ ಸೇವಾ ಟ್ರಸ್ಟ್ ನಾ ಭಾರವಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!