January 31, 2026

ಒಡಿಯೂರಿನಲ್ಲಿ ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನ: ತುಳುಸಿರಿ ಪ್ರಶಸ್ತಿ ಪ್ರದಾನ

0
IMG-20260127-WA0001.jpg

ವಿಟ್ಲ: ಶಿಸ್ತು ಸಂಯಮ ಬದುಕಿನ ಕಣ್ಣುಗಳಂತೆ. ಸೈನಿಕರ ಸೇವೆ ಅಪರ್ಣಾ ಮನೋಭಾವ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿ ಆಗಿದೆ. ಸೈನಿಕ ತ್ಯಾಗ ಮನೋಭಾವ ಪ್ರಶಂಸನೀಯ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಒಡಿಯೂರು ನಲ್ಲಿ ನಡೆದ ವಂದೇ ಮಾತರಂ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಯೋಧರಿಗೆ ತುಳುಸಿರಿ ಪ್ರಶಸ್ತಿ ನೀಡಿ ಅನುಗ್ರಹ ಸಂದೇಶ ನೀಡಿದರು. ದೇಶದ ರಕ್ಷಕರಾದ ಸೈನಿಕರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಮಾತೃಭಾಷೆ ಯನ್ನು ಉಳಿಸಿಕೊಂಡು ರಾಷ್ಟ್ರದ ರಕ್ಷಣೆಯಲ್ಲಿ ಜೋಡಿಸಿಕೊಳ್ಳೋಣ ಎಂದು ಒಡಿಯೂರು ಶ್ರೀಗಳು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಭಾರತೀಯ ಜನತಾ ಪಕ್ಷದ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ ಅತಿಥಿಗಳಾಗಿದ್ದರು. ತುಳು ಸಾಹಿತ್ಯ ಸಮ್ಮೇಳನೊದ ಪ್ರಧಾನ ಸಂಚಾಲಕ ಡಾ ವಸಂತ ಕುಮಾರ್ ಪೆರ್ಲ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತುಳು ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ತುಳು ಭಾಷೆ ಮತ್ತು ತುಳು ಶಬ್ದ ಭಂಡಾರವನ್ನು ಉಳಿಸಿಕೊಳ್ಳುವ ಅಗತ್ಯ ಇದೆ. ಕಂಬಳ, ನೇಮ, ಜಾತ್ರೆ ಬಗ್ಗೆ ಸೇರುವ ಜನರು ಕಂಡಾಗ ಯುವಜನತೆ ತುಳು ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದಿರುವುದು ಕಾಣಿಸುತ್ತದೆ ಎಂದರು.

ತುಳುಸಿರಿ ಪ್ರಶಸ್ತಿ:
ಸಮಾರಂಭದಲ್ಲಿ ನಿವೃತ್ತ ಯೋಧರಾದ
ಎ.ಕೆ. ಜಯಚಂದ್ರನ್ ಮಂಗಳೂರು, ರಾಜೇಶ್ ಹೊಳ್ಳ ಮಂಗಳೂರು, ಡಿ. ಚಂದಪ್ಪ ಮೂಲ್ಯ, ನಿವೃತ್ತ ಡೆಪ್ಯೂಟಿ ಕಮಾಂಡೆಂಟ್, ಬಿ.ಎಸ್.ಎಫ್., ದೀಪಕ್ ಅಡ್ಯಂತಾಯ ಮಂಗಳೂರು, ಸುಧೀರ್ ಪೈ ಮಂಗಳೂರು, ಪೂವಪ್ಪ ಪೂಜಾರಿ, ಅಪ್ಪು ಶೆಟ್ಟಿ ಮಂಗಳೂರು, , ಜನಾರ್ದನ, , ಎಂ.ಬಿ. ರಾಜ, ಪುರುಷೋತ್ತಮ ಕೆ.ಸಿ., ಭಾಸ್ಕರ ಮುಲ್ಕಿ, ಸುಂದರ ಗೌಡ ಕೆ. ನಡುಬೈಲ್, ವಸಂತ ಗೌಡ ದೇವಸ್ಯ, ನಾಗಪ್ಪ ಗೌಡ ಕೇಪುಳು, ಸುಂದರ ಕೆ. ನೈತ್ತಾಡಿ, ಪುರಂದರ ಡಿ. ಚಂದಳಿಕೆ, ಚಂದ್ರಶೇಖರ ಗೌಡ ಎ. ಪಡ್ನೂರು, ವಸಂತಕುಮಾರ್ ಬಿ. ಪುತ್ತೂರು, ವೆಂಕಪ್ಪ ಗೌಡ ಪುಣಚ, ಬಾಲಕೃಷ್ಣ ಗೌಡ ಮಂಗಲಪದವು, ಚಂದ್ರ ಕೆ. ವಿಟ್ಲ, ಬಾಲಕೃಷ್ಣ ರೈ ಗೊಳ್ತಮಜಲು, ಕುಶಾಲಪ್ಪ ಗೌಡ ವಿಟ್ಲ, ಧನಂಜಯ ಗೌಡ ಮಂಗಲಪದವು, ಎಡ್ವಿನ್ ರಾಡ್ರಿಗಸ್ ವಿಟ್ಲ, ದಾಸಪ್ಪ ಪೂಜಾರಿ ಮಂಗಲಪದವು, ಅಶೋಕ ವಿಟ್ಲ, ಕರಿಬಸಪ್ಪ, ಬಿ.ಸಿ.ರೋಡ್, ಐವಾನ್ ಮೆನೆಜಸ್, ಬಿ.ಸಿ.ರೋಡ್, ರಮೇಶ್ ಕನ್ಯಾನ, ಸೂರ್ಯಕಾಂತ್ ಹಾಗೂ ಮೋಹನದಾಸ ಅವರನ್ನು ‘ತುಳುಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿದರು. ಪ್ರವೀಣ ಕುಮಾರ್ ವಂದಿಸಿದರು. ವಾರುಣಿ ನಾಗರಾಜ ಆಚಾರ್ಯ ಮಂಗಳಾದೇವಿ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಗಂಟೆ ೬ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

error: Content is protected !!