ವಿಟ್ಲ: ಪಡ್ನೂರು ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ
ವಿಟ್ಲ: ವಿಟ್ಲ ಪಡ್ನೂರು ವಲಯ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಮತ್ತು ಮೂಲ ಸ್ವರೂಪವನ್ನು ಬದಲಾಯಿಸಿದ ಕೇಂದ್ರ ಸರಕಾರದ ಧೋರಣೆಯ ವಿರುದ್ಧ ವಿಟ್ಲ ಪಡ್ನೂರು ಗ್ರಾಮ ಪಂಚಾಯತಿನ ಎದುರುಗಡೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಬಿ ಸಂದೇಶ್ ಶೆಟ್ಟಿ ಯವರ ನೇತೃತ್ವದಲ್ಲಿ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಎಂಎಸ್ ಮಹಮ್ಮದ್ ಮಾತನಾಡಿ ಮಹಾತ್ಮ ಗಾಂಧಿಯವರನ್ನು ಬಿಜೆಪಿ ಒಪ್ಪವುದಿಲ್ಲ. ಸೋನಿಯಾ ಗಾಂಧಿ ಮತ್ತು ಮನಮೋಹನ ಸಿಂಗ್ ಈ ದೇಶದ ಬಡ ಕೂಲಿ ಕಾರ್ಮಿಕರ ಕೃಷಿ ಕೂಲಿ ಕಾರ್ಮಿಕರ ಮೂರು ಹೊತ್ತಿನ ಊಟ ಮಾಡಲು ಕಷ್ಟ ಪಡುತ್ತಿದ್ದ ಸಂದರ್ಭ ನೂರು ದಿನ ಅವರಿಗೆ ಕೂಲಿ ಕೊಡುವುದರ ಮುಖಾಂತರ ಅವರ ಸ್ವತಃ ಜಮೀನಿನಲ್ಲಿ ಕೆಲಸ ಮಾಡಿದರೂ ಕೂಡ ಕೂಲಿ ನೀಡುವಂತ ಯೋಜನೆ ಜಾರಿಗೆ ತಂದಿತ್ತು. ಬಡವರ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಚಿಂತನೆ ಇಲ್ಲದ ಕೇಂದ್ರ ಸರಕಾರವಾಗಿದೆ. ಈ ಕಾನೂನಿನ ಸ್ವರೂಪವನ್ನು ಬದಲಾವಣೆ ಮಾಡಿ ಜನರನ್ನು ಕಷ್ಟಕ್ಕೆ ದೂಡಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸಿನ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ, ಕುಳಾಲು, ಗ್ರಾಮ ಪಂಚಾಯತಿನ ಸದಸ್ಯರಾದ ಶರೀಫ್ ಕೊಡಂಗೆ, ಲಕ್ಷ್ಮಿ, ಗ್ರಾಮ ಪಂಚಾಯತಿನ ಮಾಜಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಡಂಬು, ಪಾಣೆಮಂಗಳೂರು ಬ್ಲಾಕ್ ನ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಉಮರ್ ಕೊಡಂಗೆ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಯಾದ ಅಬ್ದುಲ್ ಕುoಞ, ಕೊಡಂಗಾಯಿ ಕಿಶನ್ ಘಟಕದ ಅಧ್ಯಕ್ಷ ಪ್ರಕಾಶ್ ರೈ ಎರ್ಮಿನಿಲೆ, ಬೂತ್ ಅಧ್ಯಕ್ಷರುಗಳಾದ ತಮ್ಮಯ್ಯ ಗೌಡ ನೂರುದ್ದೀನ್ , ಹರೀಶ್ ಗೌಡ ಬನ, ವಲಯದ ಯುವ ಕಾಂಗ್ರೆಸ್ ನ ಅಧ್ಯಕ್ಷ ನವೀನ್ ಗೌಡ ಪೂರ್ಲ ಪಾಡಿ , ಹೇಮನಾಥ್ ಆಳ್ವ ಎರ್ಮೆ ನಿಲೆ, ಅಜರುದ್ದೀನ್, ಕೊಡಂಗಾಯಿ, ಇಬ್ರಾಹಿಂ ಉಪಸ್ಥಿತರಿದ್ದರು.
ಪ್ರತಿಭಟನೆಯ ಬಳಿಕ ಕೇಂದ್ರ ಸರಕಾರ ಈ ಧೋರಣೆಯಿಂದ ಕೂಡಲೇ ಹಿಂದೆ ಸರಿಯಬೇಕು ಬಡ ಕಾರ್ಮಿಕರಿಗೆ ಜೀವನಾಧಾರವಾದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯಥಾ ಸ್ಥಿತಿ ಮುಂದುವರಿಸಬೇಕು ಎನ್ನುವ ಮನವಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರಿಶೈಲಾ ಡೋಣಾರ ರವರಿಗೆ ಸಲ್ಲಿಸಲಾಯಿತು.




