ಮಾಣಿ: ಸಮುದಾಯದತ್ತ ಸಾಂತ್ವನ ಅಭಿಯಾನ-ಸ್ವಚ್ಛ ಮನೆ ಸ್ವಯಂ ಘೋಷಣೆ- ಸ್ವಚ್ಛತಾ ಕಾರ್ಯಚರಣೆ
ವಿಟ್ಲ: ಮಾಣಿ ಗ್ರಾಮ ಪಂಚಾಯತ್, ಜನ ಶಿಕ್ಷಣ ಟ್ರಸ್ಟ್, ಮಹಿಳಾ ಸಾಂತ್ವನ ಕೇಂದ್ರ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಣಿಕ್ಯ ಸಂಜೀವಿನಿ ಒಕ್ಕೂಟ ಹಾಗೂ ಸಂಘ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ *ಸಮುದಾಯದತ್ತ ಸಾಂತ್ವನ ಅಭಿಯಾನ* ಕಸ ಮುಕ್ತ, ನಶೆ ಮುಕ್ತ, ಹಿಂಸಾಮುಕ್ತ ಮಾದರಿ ಗ್ರಾಮ *ಸ್ವಚ್ಛ ಮನೆ ಸ್ವಯಂ ಘೋಷಣೆ- ಸ್ವಚ್ಛತಾ ಕಾರ್ಯಚರಣೆ* ದಿನಾಂಕ : 19-01-2026ರಂದು ನಡೆಯಿತು.

ಮಾಣಿ ಗ್ರಾಮ ಪಂಚಾಯತ್ ನಿಂದ ಮಾಣಿ ಜಂಕ್ಷನ್, ಸೂರಿಕುಮೇರು ಜಂಕ್ಷನ್ ನಲ್ಲಿ ಸ್ವಚ್ಛತಾ ಅರಿವು ಮೂಡಿಸುತ್ತ ಅಂಗಡಿ ಮುಂಗಟ್ಟುಗಳು, ಸ್ಥಳೀಯ ಮನೆಗಳಿಗೆ ಭೇಟಿ ನೀಡಿ, ಸ್ವಚ್ಛತೆ ಹಾಗೂ ಸಾಂತ್ವನ ಕೇಂದ್ರದ ಕರಪತ್ರಗಳನ್ನು ವಿತರಿಸಿ ಮಾಣಿ ಗ್ರಾಮವನ್ನು ಕಸಮುಕ್ತ – ನಶೆಮುಕ್ತ – ಹಿಂಸಾಮುಕ್ತ ಮಾದರಿ ಗ್ರಾಮವನ್ನಾಗಿಸುವಲ್ಲಿ ಮಾಣಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಕೈಜೋಡಿಸಬೇಕೆಂದು ವಿನಂತಿಸಲಾಯಿತು. ತ್ಯಾಜ್ಯ ನಿರ್ವಹಿಸಿ ಸ್ವಚ್ಛ ಸಂಕೀರ್ಣ ವಾಹಿನಿಗೆ ನೀಡುತ್ತಿರುವ ಮನೆಯಿಂದ ಸ್ವಚ್ಛ ಮನೆ ಘೋಷಣೆ ಪತ್ರವನ್ನು ಸ್ವೀಕರಿಸಲಾಯಿತು.
ಇಂದಿನ ಸ್ವಚ್ಛತಾ ಕಾರ್ಯಾಚರಣೆಯಲ್ಲಿ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಸುದೀಪ್ ಕುಮಾರ್ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಜಾತ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗಿರಿಜಾ.ಪಿ, ಪಂಚಾಯತ್ ಸದಸ್ಯರುಗಳು, ಬಂಟ್ವಾಳ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಶ್ರೀಮತಿ ವಿದ್ಯಾ, ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಜನಾರ್ಧನ ಪೆರಾಜೆ, ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಹಿಳಾ ಮಕ್ಕಳ ವಯಸ್ಕರ ಅಭಿವೃದ್ಧಿ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಸಚ್ಚಿದಾನಂದ ರೈ, ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕಿ ಶ್ರೀಮತಿ ದೀಕ್ಷಿತ, ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಕುಮಾರಿ ದಾಕ್ಷಾಯಿಣಿ, ಪಂಚಾಯತ್ ಸಿಬ್ಬಂದಿಗಳು, ಮಾಣಿಕ್ಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವಿಜಯ, ಎಂ.ಬಿ.ಕೆ ಸ್ವಾತಿ, ಎಲ್.ಸಿ.ಆರ್.ಪಿ ಲೈಲಾಬಿ, ಪಶುಸಖಿ ಚೈತ್ರಾ ಕುಮಾರಿ, ಕೃಷಿ ಸಖಿ ಕವಿತಾ, ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಾಣಿ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಕರ್ನಾಟಕ ಪ್ರೌಢಶಾಲಾ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.




