ವಿಟ್ಲ: ಜಾತ್ರೋತ್ಸವ ಪ್ರಯುಕ್ತ ರಮಾನಾಥ ವಿಟ್ಲ ಸಾರಥ್ಯದಲ್ಲಿ ವಿಟ್ಲೋತ್ಸವ-ಸಾಧಕರಿಗೆ ಸನ್ಮಾನ
ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಹೂ ತೇರಿನಂದು VRC ವಿಟ್ಲ ಇದರ ಆಶ್ರಯದಲ್ಲಿ ರಮಾನಾಥ ವಿಟ್ಲ ಇವರ ಸಾರಥ್ಯದಲ್ಲಿ 33 ನೇ ವರ್ಷದ “ವಿಟ್ಲೋತ್ಸವ 2026 ” ಮಾದರಿ ಶಾಲಾ ವಠಾರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಕ್ರೀಡಾಪಟು ಗಳಾದ ಈಜು ಪಟುಗಳಾದ ಲಕ್ಷ್ಮೀ ಗಾಣಿಗ ಮತ್ತು ಚರಿತ್ ಅಮಿನ್ ಕೆ, ಕಬಡ್ಡಿ ಪಟುಗಳಾದ ತೀರ್ಥೇಶ್, ತರುಣ್ ಕೃಷ್ಣ ಜಿ ಎಸ್ ಮತ್ತು ಮೊಹಮ್ಮದ್ ಶಾಹಿಲ್ ಇವರನ್ನು ಸನ್ಮಾನಿಸಲಾಯಿತು. ಹಾಗೂ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ನಿರ್ದೇಶನದಲ್ಲಿ ಕಲಾ ಸಂಗಮದ ಶಿವದೂತೆ ಗುಳಿಗೆ ನಾಟಕ ತಂಡದಿಂದ “ಛತ್ರಪತಿ ಶಿವಾಜಿ” ತುಳು ನಾಟಕ ಪ್ರದರ್ಶನ ಗೊಂಡಿತು.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಸಂಗೀತ ನಿರ್ದೇಶಕ ಮನೋಹರ್ ವಿಟ್ಲ, ವಿಜಯ ಕುಮಾರ್ ಕೊಡಿಯಾಲ್ ಬೈಲ್, ಕೃಷ್ಣಯ್ಯ ಕೆ ವಿಟ್ಲ ಅರಮನೆ ಇವರು ಉಪಸ್ಥಿತರಿದ್ದರು VRC ವಿಟ್ಲ ಇದರ ಅಧ್ಯಕ್ಷ ರಮಾನಾಥ ವಿಟ್ಲ ಪ್ರಸ್ತಾವಿಸಿ, ಸ್ವಾಗತಿಸಿ ವಂದಿಸಿದರು. ನಟೇಶ್ ವಿಟ್ಲ ನಿರೂಪಿಸಿದರು. ತುಳಸಿ ದಾಸ್ ಶೆಣೈ, ಅಶೋಕ ವಿಟ್ಲ ಮತ್ತು ಮೋಹನ್ ಕಟ್ಟೆ ಸಹಕರಿಸಿದರು.




