ವಿಟ್ಲ ಜಾತ್ರೋತ್ಸವ-ಮಹಾರಥೋತ್ಸವ ಹಿನ್ನೆಲೆ: ಜ.21ರಂದು ಜಾತ್ರೆಗೆ ಆಗಮಿಸುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ ಪೊಲೀಸ್ ಇಲಾಖೆ
ನಾಳೆ ದಿನ ದಿನಾಂಕ 21/01/26 ರಂದು ವಿಟ್ಲ ಮಹಾ ರಥೋತ್ಸವದ ನಿಮಿತ್ತ ಬರುವ ಭಕ್ತಾದಿಗಳಿಗೆ ಈ ಕೆಳಕಂಡ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
1) ಕೇರಳ, ಸಾರಡ್ಕ ಪೆರುವಾಯಿ ಪುಣಚ ಕನ್ಯಾನ ಕಡೆಯಿಂದ ಬರುವ ಭಕ್ತಾದಿಗಳಿಗೆ ಬಾಕಿ ಮಾರು ಗದ್ದೆಯಲ್ಲಿ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ದು ನಿಲ್ದಾಣದ ಬಲಿ ವಾಹನ ಪಾರ್ಕಿಂಗಿನ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
2) ಸಾಲೆತ್ತೂರು, ಕುಡ್ತಮುಗೇರು ಕಡೆಯಿಂದ ಬರುವ ಭಕ್ತಾದಿಗಳಿಗೆ ವಿಟ್ಲ ಮಾದರಿ ಶಾಲಾ ವಠಾರ ಹಾಗೂ ಕಾಲೇಜು ಮೈದಾನದಲ್ಲಿ ವಾಹನ ಪಾರ್ಕಿಂಗಿನ ವ್ಯವಸ್ಥೆ ಮಾಡಲಾಗಿರುತ್ತದೆ.
3) ಪುತ್ತೂರು ಕಂಬಳ ಬೆಟ್ಟು ಕುಂಡಡ್ಕ ಕಡೆಯಿಂದ ಬರುವ ಭಕ್ತಾದಿಗಳಿಗೆ ವಾಹನದ ಪಾರ್ಕಿಂಗ್ ವ್ಯವಸ್ಥೆಯನ್ನು ವಿಟ್ಲ ಮೇಗಿನಪೇಟೆ ಬ್ರೈಟ್ ಆಡಿಟೋರಿಯಂ ನಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ. ಹಾಗೂ ನಾಳೆ ದಿನ ವಿಟ್ಲ ಬಿಎಸ್ಎನ್ಎಲ್ ಆಫೀಸ್ ಕಡೆಯಿಂದ, ಬೊಬ್ಬೆಕೇರಿ ರಸ್ತೆಯಿಂದ ಹಾಗೂ ವಿಟ್ಲ ಕ್ವಾಲಿಟಿ ಬೇಕರಿ ಕಡೆಯಿಂದ ಹೋಗುವ ರಸ್ತೆಗಳಲ್ಲಿ ಯಾವುದೇ ವಾಹನಗಳಿಗೆ ಪ್ರವೇಶವಿರುವುದಿಲ್ಲ.




