ವಿಟ್ಲ ಜಾತ್ರೋತ್ಸವ ಪ್ರಯುಕ್ತ ಜ.20ರಂದು VRC ವಿಟ್ಲ ಆಶ್ರಯದ ರಮನಾಥ ವಿಟ್ಲ ಸಾರಥ್ಯದಲ್ಲಿ 33 ನೇ ವರ್ಷದ “ವಿಟ್ಲೋತ್ಸವ”
ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಬಹಳ ವೈಭವದಿಂದ ನಡೆಯುತ್ತಿದ್ದು, ಈ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಗಿ ದಿನಾಂಕ 20ರಂದು ವಿಟ್ಲ ಸರಕಾರಿ ಮಾದರಿ ಶಾಲಾ ವಠಾರದಲ್ಲಿ VRC ವಿಟ್ಲ ಆಶ್ರಯದ ರಮನಾಥ ವಿಟ್ಲ ಸಾರಥ್ಯದಲ್ಲಿ 33 ನೇ ವರ್ಷದ “ವಿಟ್ಲೋತ್ಸವ” ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ, ವಿ. ಮನೋಹರ್ ಸಾಹಿತಿ ಮತ್ತು ಸಂಗಿತ ನಿರ್ದೇಶಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಲಕ್ಷೀ ಗಾಣಿಗ ಈಜುಪಟು, ಚರಿತ ಅಮಿನ್ ಕೆ ಈಜುಪಟು, ತೀರ್ಥೆಶ್ ಕಬಡ್ಡಿಪಟು, ತರುಣ್ ಕೃಷ್ಣ ಜಿ.ಎಸ್
ಕಬಡ್ಡಿಪಟು, ಮೊಹಮ್ಮದ್ ಶಾಹಿಲ್ ಕಬಡ್ಡಿಪಟು ಪುರಸ್ಕ್ರತಗೊಳ್ಳುವರು.
ಸಂಜೆ 7 ಗಂಟೆಗೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರು ಅರ್ಪಿಸುವ ‘ಶಿವದೂತೆ ಗುಳಿಗೆ’ ನಾಟಕ ಖ್ಯಾತಿಯ ತಂಡದಿಂದ ‘ಛತ್ರಪತಿ ಶಿವಾಜಿ’ ನಾಟಕ ಪ್ರದರ್ಶನವು ನಡೆಯಲಿದೆ.




