ವಿಟ್ಲ: ಜಾತ್ರೋತ್ಸವ ಪ್ರಯುಕ್ತ ಸಮರ್ಪಣ್ ಕಲೋತ್ಸವ-ರಾಘು ಮಾಸ್ರ್ಟು ತುಳುನಾಟಕ
ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಪ್ರಯುಕ್ತ ಶ್ರೀದೇವರ ನಿತ್ಯೋತ್ಸವದ ಶುಭದಿನ
ಸಮರ್ಪಣ್ ಕಲೋತ್ಸವ 2026 ಕಾರ್ಯಕ್ರಮದ ಅಂಗವಾಗಿ ಚೈತನ್ಯ ಕಲಾವಿದರು ಬೈಲೂರು ಇವರ “ರಾಘು ಮಾಸ್ಟ್ರು” ತುಳು ಹಾಸ್ಯಮಯ ನಾಟಕ ನಡೆಯಿತು.

ಈ ಸಂದರ್ಭ ಸಾಧಕರಿಗೆ ಗೌರವ ಸಮರ್ಪಣೆ ಹಾಗೂ ವಿದ್ಯಾ ನಿಧಿ ವಿತರಣೆ ಮತ್ತು ಆರೋಗ್ಯನಿಧಿ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಮಾರಂಭದ ಅಧ್ಯಕ್ಷತೆ ಸಮರ್ಪಣ್ ವಿಟ್ಲ ಇದರ ಅಧ್ಯಕ್ಷ ಯಶವಂತ್ N ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮರ್ಪಣ್ ವಿಟ್ಲ ಗೌರವಾಧ್ಯಕ್ಷ ಕೃಷ್ಣಯ್ಯ ವಿಟ್ಲ ಅರಮನೆ , ವಿ.ನರಸಿಂಹ ವರ್ಮ, ಕಾನೂನು ಅಧಿಕಾರಿ ಕೆ ಎಸ್ ಆರ್ ಟಿ ಸಿ ಕೇಂದ್ರ ಕಚೇರಿ ಬೆಂಗಳೂರು, ನಿತಿನ್ ಪಕಳ ಮಾಲಕರು ಪುತ್ತೂರು ಪ್ರಾಪರ್ಟಿಸ್ ಪುತ್ತೂರು, ಶಿಶಿರ್ ಪೆರ್ವೋಡಿ ಅಧ್ಯಕ್ಷ ಯುವ ಮೋರ್ಚಾ ಭಾರತೀಯ ಜನತಾ ಪಾರ್ಟಿ ಪುತ್ತೂರು ಮಂಡಲ, ಸದಾನಂದ ಶೆಟ್ಟಿ ಅಲ್ಚಾರ್ ಉದ್ಯಮಿಗಳು ಬೆಂಗಳೂರು ,
ದೀಕ್ಷಿತ್ ಗೌಡ ಇಂಜಿನಿಯರ್ ಬೆಳಾಲು, ರಮಾನಾಥ ವಿಟ್ಲ ಅಧ್ಯಕ್ಷ VRC ವಿಟ್ಲ, ಬಿ ಪುಷ್ಪಲತಾ ನಿವೃತ್ತ ಉದ್ಯೋಗಿ ಸಣ್ಣ ನೀರಾವರಿ ಇಲಾಖೆ ಕರ್ನಾಟಕ ಸರ್ಕಾರ ಇವರು ಭಾಗವಹಿಸಿ ಶುಭ ಹಾರೈಸಿದರು.
ಭಜನಾ ಸೇವೆಯಲ್ಲಿ ಸಾಧನೆಯನ್ನು ಮಾಡಿದ ವಿಶ್ವನಾಥ್ ದೇವಾಡಿಗ ಹಾಗೂ ಸಮಾಜಸೇವೆಯಲ್ಲಿ ಸಾಧನೆಯನ್ನು ಮಾಡಿದ ಬಾಲಕೃಷ್ಣ ಪೂಜಾರಿ ಸಣ್ಣಗುತ್ತು ಹಾಗೆಯೇ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ತೇಜಸ್ ಎಂ ಎಸ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಅಲ್ಲದೆ ಬಡ ಕುಟುಂಬಕ್ಕೆ ಆರೋಗ್ಯ ನಿಧಿ ನೀಡಲಾಯಿತು. ಸಮರ್ಪಣ್ ವಿಟ್ಲ ಇದರ ಅಧ್ಯಕ್ಷ ಯಶವಂತ ಎನ್ ಸ್ವಾಗತಿಸಿದರು. ಕೋಶಾಧಿಕಾರಿ ನಿಖಿಲ್ ಸಾಲ್ಯಾನ್ ಪ್ರಾಸ್ತಾವಿಸಿದರು, ಸಂಘಟನಾ ಕಾರ್ಯದರ್ಶಿ ರವಿಶಂಕರ್ ವಿಟ್ಲ ವಂದಿಸಿದರು. ಸಂಚಾಲಕ ಹರೀಶ್ ಕೆ ವಿಟ್ಲ ನಿರೂಪಿಸಿದರು. ವಿಶ್ವನಾಥ ನಾಯ್ತೊಟ್ಟು ಮತ್ತು ಪ್ರಕಾಶ್ ಮಾಸ್ಟರ್ ಸಹಕರಿಸಿದರು. ತುಳಸಿದಾಸ್ ಶೆಣೈ ವಿಟ್ಲ ವಂದೇ ಮಾತರಂ ಹಾಡಿದರು. ಸಮರ್ಪಣ್ ವಿಟ್ಲ ಇದರ ಪದಾಧಿಕಾರಿಗಳಾದ ಶ್ರವಣ್ ಆಚಾರ್ಯ, ರೋಹಿತ್ ಕಟ್ಟೆ, ರಕ್ಷಿತ್ R S, ರವಿವರ್ಮ ವಿಟ್ಲ ಅರಮನೆ, ಯಾದವ ಮಂಗಳಪದವು, ಸೂರಜ್ ಕೋಟ್ಯಾನ್, ದೀಪಕ್ ಕಟ್ಟೆ, ಪವನ್ ಕಟ್ಟೆ, ಮನೋಜ್ ವಿಟ್ಲ, ಸುಜನ್, ಕೀರ್ತನ್, ಸಂದೀಪ್ ಕಿರೋಡಿಯನ್ ಉಪಸ್ಥಿತರಿದ್ದರು.




