ಕನ್ಯಾನ: ದುಲ್ ಫುಖಾರ್ ಗಲ್ಫ್ ಕಮಿಟಿ ವತಿಯಿಂದ ನವೀಕರಿಸಿದ ಮನೆ ಹಸ್ತಾಂತರ
25 ವರ್ಷಗಳಿಂದ ಬಡ ಮತ್ತು ಅನಾಥರ ಸೇವೆಗೈಯುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುಲ್ ಪ್ರಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ ಇದರ ಸಿಲ್ವರ್ ಜ್ಯುಬಿಲಿ ಹಬ್ಬದ ಪ್ರಯುಕ್ತ ದುಲ್ ಪುಖಾರ್ ಗಲ್ಫ್ ಕಮಿಟಿ ವತಿಯಿಂದ ದುಸ್ಥಿತಿಯಲ್ಲಿದ್ದ ಹಳೆಯ ಮನೆಯನ್ನು ನವೀಕರಿಸಿ ನೀಡಲಾಯಿತು
ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಿಸಿದ ಮನೆಯ ಉದ್ಘಾಟನೆಯನ್ನು 2026 ಜನವರಿ 16 ಶುಕ್ರವಾರ ಕನ್ಯಾನ ಕೇಂದ್ರ ಜುಮಾ ಮಸ್ಜಿದ್ ಧರ್ಮ ಗುರು ಕೆ.ಎಂ ಇಬ್ರಾಹಿಂ ಫೈಝಿ ನೆರವೇರಿಸಿದರು
ಕುಕ್ಕಾಜೆ ಖತೀಬ್ ಮುಹಮ್ಮದ್ ನಿಯಾಝ್ ಕಾಮಿಲ್ ಸಖಾಫಿ, ದುಲ್ ಪ್ರಖಾರ್ ಮಾಜಿ ಗೌರವಧ್ಯಕ್ಷ ಅಶ್ರಫ್ ಮದನಿ, ಕಮಿಟಿ ಪದಾದಿಕಾರಿಗಳು, ಗಲ್ಫ್ ಕಮಿಟಿ ಪ್ರತಿನಿದಿಗಳು ಮತ್ತು ಇತರರು ಉಪಸ್ಥಿತರಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಸೇವಾ ಕೈಂಕರ್ಯದಲ್ಲಿ ಸದಾ ಮುಂದಿರುವ ದುಲ್ ಪ್ರಖಾರ್ ಸಂಘಟನೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ




