ಕೊಳ್ನಾಡು: ಪ.ಜಾತಿ ಮತ್ತು ಪ.ಪಂಗಡದ ವಿಶೇಷ ಗ್ರಾಮ ಸಭೆ
ಬಂಟ್ವಾಳ: ತಾಲೂಕು ಕೊಳ್ಳಾಡು ಗ್ರಾಮ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ 2025-26ನೇ ಸಾಲಿನ ಪ.ಜಾತಿ ಮತ್ತು ಪ.ಪಂಗಡದ ವಿಶೇಷ ಗ್ರಾಮ ಸಭೆಯು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಕೆ ಅಶ್ರಫ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 16.01.2026ನೇ ಶುಕ್ರವಾರ ಪೂರ್ವಾಹ್ನ 10.30ಕ್ಕೆ ಜರುಗಿತು.
ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಹರೀಶ ಕೆ ಎ. ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ವಿಶೇಷ ಗ್ರಾಮ ಸಭೆ ಕರೆದಿರುವ ಬಗ್ಗೆ ಸಭೆಗೆ ತಿಳಿಸಿದರು.
ಪ.ಜಾತಿ/ಪ.ಪಂಗಡ ಸಮುದಾಯದ ಶ್ರೀ ಜಯರಾಮ ಕೆ ಇವರು ಕಡಪಿಕೇರಿ ಕಾಡುಮಠ ಕಾಲೋನಿಗೆ ಅಗತ್ಯವಾಗಿ ಬೇಕಾಗುವ ರಸ್ತೆ, ದಾರಿದೀಪ, ಚರಂಡಿ, ಸೇತುವೆಗಳ ಬಗ್ಗೆ ಮನವಿ ಸಲ್ಲಿಸಿ ಮನವಿ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ನೀಡಿದರು. ಸಮುದಾಯದವರಿಂದ ಅರ್ಜಿ ಮತ್ತು ಅವಹಾಲುಗಳನ್ನು ಸ್ವೀಕರಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ನ ಸದಸ್ಯರುಗಳಾದ ಶ್ರೀ ಸುಭಾಶ್ಚಂದ್ರ ಶೆಟ್ಟಿ, ರಾಜರಾಮ ಆಳ್ವ, ಸೌಮ್ಯಲತಾ ಎನ್, ಸುಲೋಚನಾ ರೈ ಸವಿತಾ, ಜಯಂತಿ ಎಸ್ ಪೂಜಾರಿ, ದೇವಕಿ, ನತಾಲಿಯಾ ಕುಟಿನ್ಹಾ, ಸಂಜೀವಿ, ಲವೀನಾ ಫರಾವೋ, ಲೋಹಿತ್ ಎ, ಹರೀಶ್ ಎಂ, ಅನಿತಾ, ಇವರು, ಉಪಸ್ಥಿತರಿದ್ದರು. ಸಭೆಯಲ್ಲಿ ಪ.ಜಾತಿ/ಪ.ಪಂಗಡದ ಸಮುದಾಯದವರ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲಾಯಿತು. ಗ್ರಾಮ ಪಂಚಾಯತ್ ಲೆಕ್ಕ ಸಹಾಯಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.




