March 18, 2026

ಕಾರಿನ  ಸೈಲೆನ್ಸರ್ ಆಲ್ಟರ್, ಮೋಡಿಫೈ: 1.11 ಲಕ್ಷ ರೂ. ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

0
image_editor_output_image567262527-1768560067860.jpg

ಬೆಂಗಳೂರು: ಕಾರಿನ ಸೈಲೆನ್ಸರ್ ಆಲ್ಟರ್ ಮಾಡಿ ಸಾರ್ವಜನಿಕವಾಗಿ ಸ್ಥಳಗಳಲ್ಲಿ ಶಬ್ದ ಮಾಡುತ್ತಿದ್ದ ವ್ಯಕ್ತಿಗೆ ಟ್ರಾಫಿಕ್‌ ಪೊಲೀಸರು ಬರೋಬ್ಬರಿ 1.11 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಹೆಣ್ಣೂರು ನಿವಾಸಿಯಾಗಿರೋ ವ್ಯಕ್ತಿಯೊಬ್ಬರು, ಕಾರಿನ ಸೈಲೆನ್ಸರ್ ಆಲ್ಟರ್ ಮಾಡಿಸಿದ್ದರು. ಜೊತೆಗೆ ಕಾರಿನ ಮೇಲೆ ಸ್ಟಿಕ್ಕರ್ ಮಾಡಿಸಿದ್ದರು. ಹಾಗೇ ಆಲ್ಟರ್ ಮಾಡಿಸಿದ ಕಾರಿನಲ್ಲಿ ಸಾರ್ವಜನಿಕವಾಗಿ ಕರ್ಕಶವಾಗಿ ಶಬ್ದ ಮಾಡಿ ತೊಂದರೆ ಕೊಡುತ್ತಿದ್ದರು. ಅಲ್ಲದೇ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ಇದನ್ನು ಗಮನಿಸಿದ ಹೆಣ್ಣೂರು ಟ್ರಾಫಿಕ್ ಪೊಲೀಸರು ಕಾರನ್ನು ಪತ್ತೆ ಮಾಡಿ, ದಂಡ ವಿಧಿಸಿದ್ದಾರೆ. ಆ ಕಾರಿನ ಮೇಲೆ ಈ ಹಿಂದೆ ಕೂಡ ನಿಮಯ ಉಲ್ಲಂಘನೆ ಮಾಡಿದ ಕೇಸ್‌ಗಳಿವೆ. ಅದೆಲ್ಲಾ ಸೇರಿ 1.11 ಲಕ್ಷ ರೂ. ದಂಡ ಕಟ್ಟಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!