ಉಡುಪಿ: ದ್ವಿಚಕ್ರ ವಾಹನ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
ಉಡುಪಿ: ದ್ವಿಚಕ್ರ ವಾಹನ ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ರನ್ನು ಶಿವಮೊಗ್ಗ ನಿವಾಸಿಗಳಾದ ಕಿರಣ ಬಿ.ಎನ್.( 32) ಹಾಗೂ ಯೋಗೇಶ ನಾಯ್ಕ ಎನ್., ( 22) ಎಂದು ಗುರುತಿಸಲಾಗಿದೆ. ಅ.30ರಂದು ಕಾಯಿನ್ ಸರ್ಕಲ್ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾದ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿ ಕಿರಣ ಬಿ.ಎನ್. ವಿರುದ್ಧ ಈ ಹಿಂದೆಯೂ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಪತ್ತೆಗಾಗಿ ಉಡುಪಿ ಡಿವೈಎಸ್ ಪಿ ಪ್ರಭು ಡಿ.ಟಿ. ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕರಾದ ಮಹೇಶ ಪ್ರಸಾದ್ ಮಾರ್ಗದರ್ಶನದಲ್ಲಿ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಅನಿಲ್ ಬಿ.ಎಂ., ಅಕ್ಷಯಾ ಕುಮಾರಿ ಎಸ್.ಎನ್., ಸಿಬಂದಿಗಳಾದ ವಿಶ್ವಜಿತ್, ಚೇತನ್ , ಅಜ್ಮಲ್, ರವಿರಾಜ್ , ಮಂಜುನಾಥ ಸಹಕರಿಸಿದರು.




