ಉಕ್ಕುಡ ಮಸೀದಿ: ದರ್ಸ್ ವಿದ್ಯಾರ್ಥಿಗಳ ಸಾಹಿತ್ಯ ಕಲಾ ಸಂಗಮ, “ಅಲ್ ಮುರಾಫಖ- 2026”
ವಿಟ್ಲ: ಉಕ್ಕುಡ ಬದ್ರಿಯಾ ಜುಮಾ ಮಸೀದಿ, ಆಶ್ರಯದಲ್ಲಿ ಮುಹ್ಯಿಸ್ಸುನ್ನ ದರ್ಸ್‌ನ ಮುತಅಲ್ಲಿಮರ ಕಲಾ–ಸಾಹಿತ್ಯ ಕಲರವ ಅಲ್ ಮುರಾಫಖಃ 2026 ಹಾಗೂ ಮುದರ್ರಿಸ್ ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಲ್-ಹಿಕಮಿ ಅಲ್-ಅರ್ಷದಿ ಮಳಲಿ ಉಸ್ತಾದರ ದರ್ಸಿನ 15ನೇ ವಾರ್ಷಿಕೋತ್ಸವ ಆಯೋಜಿಸಲಾದ ಮೂರು ದಿನಗಳ ಸಾಹಿತ್ಯ–ಸಾಂಸ್ಕೃತಿಕ ಹಬ್ಬವು ಬಹಳ ವಿಜೃಂಭಣೆಯಿಂದ ನಡೆಯಿತು.
ಜುಮಾ ನಮಾಝಿನ ಬಳಿಕ ಅದ್ದೂರಿಯಾಗಿ ಆರಂಭಗೊಂಡ ಈ ಸಾಹಿತ್ಯ ಹಬ್ಬದಲ್ಲಿ ಮುತಅಲ್ಲಿಮರ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಅನಾವರಣಗೊಳಿಸುವ ಭಾಷಣ, ಹಾಡು, ಮೌಲಿದ್, ಖವ್ವಾಲಿ ಸೇರಿದಂತೆ ವಿವಿಧ ಸ್ಪರ್ಧೆಗಳು ಹಾಗೂ ಅಧ್ಯಯನಾತ್ಮಕ ಕಾರ್ಯಕ್ರಮಗಳು ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಮಸೀದಿ ಅಧ್ಯಕ್ಷ ಬದ್ರುಲ್ ಮುನೀರ್ ದರ್ಬೆ, ಕಾರ್ಯದರ್ಶಿ ಅಶ್ರಫ್ ಅಲಿ ನೆಕ್ಕರೆಕಾಡು, ಕೋಶಾಧಿಕಾರಿ ಮುಹಮ್ಮದ್ ಟಾಪ್ಕೋ, ನೂರುಲ್ ಹುದಾ ಹೈಯರ್ ಸೆಕೆಂಡರಿ ಮದರಸ ಉಕ್ಕುಡದ ಉಸ್ತಾದರುಗಳಾದ ಯಾಸೀನ್ ಸಅದಿ ವಿಟ್ಲ, ಸಫ್ವಾನ್ ಸಅದಿ ಚೆಂಗಳ, ಹೈದರ್ ಸಖಾಫಿ ಅಳಿಕೆ ಸೇರಿದಂತೆ ಹಲವು ಉಲಮಾ, ಉಮರಾ, ಸಾಮಾಜಿಕ ಹಾಗೂ ರಾಜಕೀಯ ನಾಯಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಟ್ಲದ ಡಾ. ಪ್ರಶಾಂತ್ ಹಾಗೂ ಪುಷ್ಪಕ್ ಕ್ಲಿನಿಕ್ ನ ಡಾ. ವಿ.ಕೆ.ಹೆಗ್ಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖುದ್ವತುಸ್ಸಾದಾತ್ ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್ ಭಾಗವಹಿಸಿ ದುವಾ ನೆರವೇರಿಸಿದರು. ಅವರನ್ನು ಜಮಾಅತ್ ಪರವಾಗಿ ಸನ್ಮಾನಿಸಲಾಯಿತು. ಜಾಮೀಯಾ ಹಿಕಮಿಯ್ಯಾ ಮುದರ್ರಿಸ್ ಅಲ್ ಉಸ್ತಾದ್ ಮುಹಮ್ಮದ್ ಸಖಾಫಿ ಇಲ್ಲಿಪುಲಾಕ್ಕಲ್ ಅವರು ಆಶೀರ್ವಚನ ನೀಡಿದರು.
ಮೂರು ದಿನಗಳ ಕಾರ್ಯಕ್ರಮದ ಅವಧಿಯಲ್ಲಿ ನಡೆದ ಸ್ಪರ್ಧೆಗಳು ಉನ್ನತ ಮಟ್ಟದ ವೈವಿಧ್ಯತೆ ಮತ್ತು ಶಿಸ್ತಿನಿಂದ ಗಮನ ಸೆಳೆದವು. ಮುತಅಲ್ಲಿಮರ ಕೈಚಳಕದಿಂದ ಅಲಂಕೃತವಾದ ವರ್ಣರಂಜಿತ ವೇದಿಕೆ, ವಿವಿಧ ಆಕರ್ಷಕ ತೋರಣಗಳು, ಖುರ್‌ಆನ್ ಎಕ್ಸ್‌ಪೋ, ಸಾಹಿತ್ಯದ ಅಗತ್ಯತೆಯನ್ನು ಸಾರುವ ಫಲಕಗಳು ಹಾಗೂ ಇತಿಹಾಸದ ಸ್ಮಾರಕಗಳ ಚಿತ್ರಗಳು ಕಾರ್ಯಕ್ರಮದ ಸ್ಥಳವನ್ನು ವಿಶೇಷವಾಗಿ ಅಲಂಕರಿಸಿತ್ತು. ಉಕ್ಕುಡದ ಪ್ರವೇಶ ದ್ವಾರದಿಂದ ಹಿಡಿದು ಪ್ರಧಾನ ವೇದಿಕೆಯವರೆಗೆ ನಿರ್ಮಿಸಲಾದ ಕಲಾತ್ಮಕ ರಚನೆಗಳು ಅತಿಥಿಗಳ ಗಮನ ಸೆಳೆದವು.
ಶಿಸ್ತು, ಅತಿಥಿ ಸ್ವಾಗತ, ಕಾರ್ಯಕ್ರಮ ನಿರ್ವಹಣೆ, ಸ್ಪರ್ಧಾ ಆಯೋಜನೆ ಹಾಗೂ ಅಂತಿಮ ಸ್ವಚ್ಛತೆವರೆಗೆ ಪ್ರತಿಯೊಂದು ಹಂತದಲ್ಲೂ ಆಯೋಜಕರ ಕಾರ್ಯಶೈಲಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಹಿಕಮಿಯ್ಯ ಪ್ರಧಾನ ಮುದರ್ರಿಸ್ ಶೈಖುನಾ ಮುಹಮ್ಮದ್ ಸಖಾಫಿ ಮಲಪ್ಪುರಂ, ಸಯ್ಯಿದ್ ಮುಕ್ತಾರ್ ತಂಙಳ್ ಕುಂಬೋಳ್ , ಮಸ್ದರ್ ಸಂಸ್ಥೆಯ ಜನರಲ್ ಮ್ಯಾನೇಜರ್ ಸಯ್ಯಿದ್ ಯೂಸುಫ್ ನವಾಝ್ ಹುಸೈನ್ ತಂಙಳ್ ಹೂಡೆ, ಸಯ್ಯಿದ್ ಶರಫುದ್ದೀನ್ ತಂಙಳ್, ಸಯ್ಯಿದ್ ಮದಕ ತಂಙಳ್, ಶೈಖುನಾ ಕನ್ಯಾನ ಉಸ್ತಾದ್, ದ್ಸಿಕ್ರಾ ಸಂಸ್ಥೆಯ ಶಿಲ್ಪಿ ನೌಫಲ್ ಸಖಾಫಿ ಕಳಸ, ಕಣ್ಣಂಗಾರ್ ಮುದರ್ರಿಸ್ ಅಶ್ರಫ್ ಸಖಾಫಿ ಕಿನ್ಯ, ಉಪ್ಪಳ್ಳಿ ಮುದರ್ರಿಸ್ ಇಸ್ಮಾಯಿಲ್ ಸಅದಿ ಮಾಚಾರ್, ತೈಬಾ ಗಾರ್ಡನ್ ಕಾರ್ಕಳ ಸಂಸ್ಥೆಯ ಪ್ರಿನ್ಸಿಪಾಲ್ ಶರೀಫ್ ಸಅದಿ ಕಿಲ್ಲೂರು, ಮುಹಮ್ಮದಲಿ ಸಖಾಫಿ ಅಶ್‌ಅರಿಯ್ಯ, ಮರ್ಕಝ್ ಕೈಕಂಬ ಸ್ಥಾಪಕರಾದ ಬದ್ರುದ್ದೀನ್ ಅಝ್ಹರಿ ಕೈಕಂಬ, ಮಜ್ಲಿಸ್ ಗಾಣೆಮಾರ್ ಸ್ಥಾಪಕರಾದ ಮಜೀದ್ ಹಾಫಿಳ್ ಬಡಕಬೈಲು, ಸಿರಾಜುದ್ದೀನ್ ಸಖಾಫಿ ಕನ್ಯಾನ, ಉಸ್ಮಾನ್ ಸಖಾಫಿ ಪಾತೂರು, ಸಿದ್ದೀಕ್ ಸಖಾಫಿ ಕಾಯಾರು, ಮುಈನುಸ್ಸುನ್ನ ಹಾವೇರಿ ಸ್ಥಾಪಕರಾದ ಮುಸ್ತಫಾ ನಈಮಿ ಮೋಂಟುಗೋಳಿ, ಸುನ್ನಿ ಪೈಝಿ, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಆರಿಫ್ ಬಾಖವಿ, ಕುಪ್ಪೆಟ್ಟಿ ಮುದರ್ರಿಸ್ ಇರ್ಶಾದ್ ಸಖಾಫಿ ಬೊಳ್ಳಾಯಿ, ಸಮಸ್ತ ಖಾರಿ ಹಾಫಿಳ್ ಜಿ.ಎಂ. ಹನೀಫಿ ಪಾಣೆಮಂಗಳೂರು, ಎಪಿಸಿಸಿ ಪ್ರದಾನ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್, ಜುಮಾ ಮಸೀದಿ ಮತ್ತು ದರ್ಗಾ ಶರೀಫ್ ಬೈತಡ್ಕ ಅಧ್ಯಕ್ಷರಾದ ಇಕ್ಬಾಲ್ ಹಾಜಿ ಬೈತಡ್ಕ, ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು.ಜಮೀಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಹಾಗೂ ಡಿ’ ಗ್ರೂಪ್ ಅಧ್ಯಕ್ಷ. ಶಾಕಿರ್ ಅಳಕೆಮಜಲು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.




