ಕೊಡಾಜೆ: ರಾಜ್ಯ ಮಟ್ಟದ ದಫ್ ಸ್ಪರ್ಧೆ, ನೂತನ ಕಛೇರಿ ಉದ್ಘಾಟನೆ, ಸನ್ಮಾನ ಹಾಗೂ ಐಕ್ಯತಾ ಜಸ್ನೇ 2026
ಬಂಟ್ವಾಳ: ಐಕ್ಯ ವೇದಿಕೆ (ರಿ) ಕೊಡಾಜೆ ಇದರ ಆಶ್ರಯದಲ್ಲಿ ರಾಜ್ಯ ಮಟ್ಟದ ದಫ್ ಸ್ಪರ್ಧೆ, ನೂತನ ಕಛೇರಿ ಉದ್ಘಾಟನೆ, ಸನ್ಮಾನ ಹಾಗೂ ಐಕ್ಯತಾ ಜಸ್ನೇ 2026 ಕಾರ್ಯಕ್ರಮ ಜ.18 ಭಾನುವಾರ ಬೆಳಗ್ಗೆ 10 ರಿಂದ ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದ್ರಸ ವಠಾರದ ಮರ್ಹೂಮ್ ಸುಲ್ತಾನ್ ಹಾಜಿ ವೇದಿಕೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 10 ಕ್ಕೆ ಕೊಡಾಜೆ ಜಂಕ್ಷನ್ ನಲ್ಲಿ ವೇದಿಕೆಯ ನೂತನ ಕಛೇರಿಯನ್ನು ಅಸಯ್ಯಿದ್ ಇಬ್ರಾಹಿಂ ಹಂಝ ಅಲ್ ಹಾದಿ ತಂಙಳ್ ಪಾಟ್ರಕೋಡಿ ಉದ್ಘಾಟಿಸಲಿದ್ದು, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಅಧ್ಯಕ್ಷತೆ ವಹಿಸುವರು. ಮದ್ಯಾಹ್ನ 3.00 ಕ್ಕೆ “ಐಕ್ಯತಾ ಜಸ್ನೇ” ಕಾರ್ಯಕ್ರಮವನ್ನು ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ಖತೀಬ್ ಸೈದಾಲಿ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಐಕ್ಯ ವೇದಿಕೆ ಉಪಾಧ್ಯಕ್ಷ ಅಬ್ದುಲ್ ರಝಾಕ್ ಅನಂತಾಡಿ ಅಧ್ಯಕ್ಷತೆ ವಹಿಸುವರು.
ಸಂಜೆ 6.30 ಕ್ಕೆ ನಡೆಯುವ ರಾಜ್ಯ ಮಟ್ಟದ ದಫ್ ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಲ ಉದ್ಘಾಟಿಸಲಿದ್ದು, ಐಕ್ಯ ವೇದಿಕೆ ಅಧ್ಯಕ್ಷ ಅಶ್ರಫ್ ಭಾರತ್ ಅಧ್ಯಕ್ಷತೆ ವಹಿಸುವರು. ಐಕ್ಯ ವೇದಿಕೆಯ ಸ್ಥಾಪಕಾಧ್ಯಕ್ಷ, ಸಲಹೆಗಾರ ಫಾರೂಕ್ ಗೋಳಿಕಟ್ಟೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸುವರು.
ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವ ಬಿ ರಮಾನಾಥ ರೈ, ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕ ಪ್ರಕಾಶ್ ದೇವಾಡಿಗ, ನೇರಳಕಟ್ಟೆ ಡಿ.ಕೆ.ಸ್ವಾಮಿ ಶ್ರದ್ದಾ ಕೇಂದ್ರದ ಡಿ.ಕೆ.ಸ್ವಾಮೀಜಿ, ಗಡಿಯಾರ್ ಗ್ರೂಪ್ ಆಫ್ ಕಂಪೆನಿ ದುಬಾಯಿ ಇದರ ಚೇರ್ಮನ್ ಇಬ್ರಾಹಿಂ ಗಡಿಯಾರ್ ಭಾಗವಹಿಸುವರು. ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಾಟಿ ವೈದ್ಯ ಸೋಮನಾಥ್ ಪಂಡಿತ್, ಕಲ್ಲಡ್ಕ ಮ್ಯೂಸಿಯಂ ಮಾಲಕ ಹಾಜಿ ಕೆ.ಎಸ್.ಯಾಸಿರ್ ಕಲ್ಲಡ್ಕ ಮತ್ತು ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಅವರಿಗೆ ಸನ್ಮಾನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ ನಡೆಯಲಿದೆ ಎಂದು ಐಕ್ಯ ವೇದಿಕೆಯ ಸಾಂಸ್ಕೃತಿಕ ಕಾರ್ಯದರ್ಶಿ ಮನ್ಸೂರ್ ನೇರಳಕಟ್ಟೆ ಹಾಗೂ ಪತ್ರಿಕಾ ಕಾರ್ಯದರ್ಶಿ ನೌಫಳ್ ಕೊಡಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




