ಬಜ್ಪೆಯಲ್ಲಿ ಮಾಹಿತಿ ಮತ್ತು ನಾಗರಿಕ ಸೇವಾ ಕೇಂದ್ರದ 15ನೇ ವರ್ಷದ ಸಂಭ್ರಮಾಚರಣೆ: SDPI ರಾಜ್ಯ, ಜಿಲ್ಲಾ ಹಾಗೂ ಕ್ಷೇತ್ರ ನಾಯಕರು ಭಾಗಿ
ಬಜ್ಪೆ: 01 ಡಿಸೆಂಬರ್ 2025 SDPI ಮಾಹಿತಿ ಮತ್ತು ನಾಗರಿಕ ಸೇವಾ ಕೇಂದ್ರದ 15ನೇ ವರ್ಷದ ಸಂಭ್ರಮಾಚರಣೆ ಹಾಗೂ ಸನ್ಮಾನ ಮತ್ತು ಸಭಾ ಕಾರ್ಯಕ್ರಮವು SDPI ಬಜಪೆ ಪಟ್ಟಣ ಪಂಚಾಯಿತಿ ಸಮಿತಿಯ ಅಧ್ಯಕ್ಷರಾದ ಹಸೈನಾರ್ ಬಜ್ಪೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
SDPI ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ದಿಕ್ಸೂಚಿ ಭಾಷಣ ಮಾಡಿದರು.
ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲಾ ಜೋಕಟ್ಟೆ ಹಾಗೂ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ಇದರ ರಾಜ್ಯ ಅಧ್ಯಕ್ಷೆಯಾದ ಫಾತಿಮಾ ನಸೀಮ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಸ್ಥಳೀಯ ಶಾಲೆಗಳಲ್ಲಿ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ
ಸಂತ ಜೋಸೆಫರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶ್ರೀಮಾನ್ ಆಲ್ವಿನ್ ನೊರೊನ್ಹ,
ಪಾಪ್ಯುಲರ್ ಬಂಟ್ಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಮಳವೂರ್ ಬಜಪೆ ಪ್ರಾಂಶುಪಾಲರಾದ ಶ್ರೀಮತಿ ಶಹನ ಎಂ ಫೆಹಲವಿ, ಏಡೆಡ್ ಪರೋಕಿಯಲ್ ಹೈಯರ್ ಪ್ರೈಮರಿ ಸ್ಕೂಲ್ ಬಜ್ಪೆ ಪ್ರಾಂಶುಪಾಲರಾದ ಶ್ರೀಮತಿ ಡಯಾನ ರೊಡ್ರಿಗಸ್ ಇವರಿಗೆ ಸನ್ಮಾನವನ್ನು ಮಾಡಲಾಯಿತು.
ಈ ಸಂಧರ್ಭದಲ್ಲಿ SDPI ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷೆ ಆಯಿಷಾ ಬಜಪೆ, ಮಂಗಳೂರು ನಗರ ಜಿಲ್ಲಾ ಕಾರ್ಯದರ್ಶಿಯಾದ ನಿಸಾರ್ ಮರವೂರ್, ಮೂಡಬಿದಿರೆ ಕ್ಷೇತ್ರ ಅಧ್ಯಕ್ಷ ಇರ್ಷಾದ್ ಹಳೆಯಂಗಡಿ, MJM ಮಸೀದಿಯ ಉಪಾಧ್ಯಕ್ಷರಾದ ಬದ್ರುದ್ದೀನ್, ಪೆರ್ಮುದೆ ಜಾಮಿಯ ಮಸೀದಿ ಅಧ್ಯಕ್ಷರಾದ ಝಹೀದ್ ಹುಸೈನ್ ಹಾಗೂ
ಬದ್ರಿಯಾ ಜುಮಾ ಮಸೀದಿ ಪೊರ್ಕೋಡಿ ಇದರ ಅಧ್ಯಕ್ಷರಾದ ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.





