March 20, 2026

IPL ಸೇರಿ ಎಲ್ಲ ಮಾದರಿಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ ಮೋಹಿತ್ ಶರ್ಮಾ

0
image_editor_output_image-1777247323-1764828177499.jpg

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೋಹಿತ್ ಶರ್ಮಾ ಅವರು ಐಪಿಎಲ್ ಸೇರಿ ಎಲ್ಲಾ ಮಾದರಿಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮೋಹಿತ್ ಅವರು, ಇಂದಿನಿಂದ, ನಾನು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ.

ಹರಿಯಾಣವನ್ನು ಪ್ರತಿನಿಧಿಸುವುದರಿಂದ ಹಿಡಿದು ಭಾರತೀಯ ಜೆರ್ಸಿ ಧರಿಸಿ, ಐಪಿಎಲ್‌ ನಲ್ಲಿ ಆಡುವವರೆಗೆ, ನನಗೆ ತುಂಬಾ ಸವಲತ್ತು ಸಿಕ್ಕಿದೆ. ತಮ್ಮ ಕ್ರಿಕೆಟ್ ವೃತ್ತಿಜೀವನದ ಬೆನ್ನೆಲುಬಾಗಿರುವ ಹರಿಯಾಣ ಕ್ರಿಕೆಟ್ ಅಸೋಸಿಯೇಷನ್‌ಗೆ ಧನ್ಯವಾದ ಅರ್ಪಿಸುತ್ತೇನೆಂದು ಹೇಳಿದ್ದಾರೆ. ↑

Leave a Reply

Your email address will not be published. Required fields are marked *

You may have missed

error: Content is protected !!