September 21, 2026

ವಿಟ್ಲದಲ್ಲಿ ನೂತನವಾಗಿ STYLUX ಫ್ಯಾನ್ಸಿ ಶುಭಾರಂಭ: ಅಳಿಕೆ ಯುವಕರ ಪ್ರಮಾಣಿಕ ಸೇವೆ, ಶ್ರಮ ಎಲ್ಲರಿಗೂ ಮಾದರಿ ಎಂ.ಎಸ್ ಮಹಮ್ಮದ್-ವಿಟ್ಲ ತಾಲೂಕು ಕೇಂದ್ರ ನಿರ್ಮಾಣಕ್ಕೆ ಇಂತಹ ಸಂಸ್ಥೆ ಪೂರಕ: ಪದ್ಮನಾಭ ಪೂಜಾರಿ

0
image_editor_output_image1377954991-1789983867244

ವಿಟ್ಲ: ವಿಟ್ಲದ ಪುತ್ತೂರು ರಸ್ತೆಯ ರೀಯಾ ಪ್ಲಾನೆಟ್ ನಲ್ಲಿ ನೂತನವಾಗಿ STYLUX ಫ್ಯಾನ್ಸಿ ಶುಭಾರಂಭಗೊಂಡಿತು.

ಅಬ್ದುಲ್ಲ ಖಾದರ್ ಸಖಾಫಿ ಉಸ್ತಾದ್ ನೂತನ ಮಳಿಗೆಯನ್ನು ಉದ್ಘಾಟಿಸಿ, ದುವಾಃ ಆಶೀರ್ವಚನ ನೀಡಿ ಶುಭ ಹಾರೈಸಿದರು.

 

ಅಳಿಕೆ ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ತಾಜುದ್ದೀನ್ ಝ್ ಹರಿ ಮಾತನಾಡಿ ಪ್ರಮಾಣಿಕ ಮತ್ತು ನಗುಮುಖದ ಸೇವೆಯಿಂದ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಮಾತನಾಡಿ ಕಳೆದು ಒಂದೂವರೆ ತಿಂಗಳುಗಳಿಂದ ಅಳಿಕೆ ಯುವಕರು ಮೂರು ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಅವರ ಶ್ರಮ ಪ್ರಯತ್ನ ಎಲ್ಲರಿಗೂ ಮಾದರಿಯಾಗಿದೆ ಎಂದರು.

ನ್ಯಾಯವಾದಿ ಪದ್ಮನಾಭ ಪೂಜಾರಿ ಸಣ್ಣಗುತ್ತು ಮಾತನಾಡಿ ಬೆಳೆಯುತ್ತಿರುವ ವಿಟ್ಲ ಪೇಟೆಗೆ ಇಂತಹ ಸಂಸ್ಥೆ ಬಂದಾಗ ಪೇಟೆ ಅಭಿವೃದ್ಧಿ ಹೊಂದುತ್ತದೆ. ವಿಟ್ಲ ತಾಲೂಕು ಕೇಂದ್ರಕ್ಕೆ ಬೇಕಾದ ಮಾನದಂಡಕ್ಕೆ ಇಂತಹ ಸಂಸ್ಥೆ ಪ್ರಾರಂಭಗೊಂಡಿದ್ದು, ಪೂರಕವಾಗಿದೆ ಎಂದರು. ಈ ಮೂವರು ಯುವಕರ ಪ್ರಯತ್ನಕ್ಕೆ ಎಲ್ಲರೂ ಸಹಕಾರ ನೀಡಬೇಕು. ಯುವಕರ ಸಾರ್ಥಕತೆಯ ಜೀವನ ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಅಬ್ದುಲ್ಲ ಸಖಾಫಿ ಪಳ್ಳಪ್ಪಾಡಿ ಶುಭ ಹಾರೈಸಿದರು.

ಜನಪ್ರಿಯ ಆಸ್ಪತ್ರೆಯ ಪಿ.ಆರ್ ಓ ಬಾತಿಷ್ ಅಳಕೆಮಜಲು ಮಾತನಾಡಿ ಅಳಿಕೆಯ ಯುವಕರು ಸೇರಿಕೊಂಡು ಸ್ಥಾಪನೆ ಮಾಡಿರುವ ಈ ಸಂಸ್ಥೆ ಯಶಸ್ವಿಯಾಗಲಿ. ಈ ಸಂಸ್ಥೆಗೆ ಎಲ್ಲರೂ ಸಹಕಾರ ನೀಡಿ ಬೆಂಬಲಿಸಬೇಕು ಎಂದರು.

ಸಂಶುದ್ದೀನ್ ಅಳಿಕೆ, ಖಾಲಿದ್ ಅಳಿಕೆ, ಶರೀಫ್ ಅಳಿಕೆ ಮಾಲಕತ್ವದ
ಇಲ್ಲಿ ಫ್ಯಾನ್ಸಿ ಫುಟ್ ವೇರ್, ಒನ್ ಗ್ರಾಂ, ಬ್ಯಾಗ್ಸ್, ಟಾಯ್ಸ್ ಮೊದಲಾದ ಫ್ಯಾನ್ಸಿ ಐಟಂಗಳು ಲಭ್ಯವಿದೆ.

ರಿಫಾಯಿ ಹಾಶೀಮ್ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!