ಪ್ರಿಯಕರನ ಹತ್ಯೆ: ಮೃತದೇಹವನ್ನೇ ಮದುವೆಯಾಗಿರುವ ಯುವತಿ
ಮುಂಬೈ: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ತನ್ನ ಮನೆಯವರಿಂದ ಹತ್ಯೆಯಾದ ಪ್ರಿಯಕರನ ಮೃತದೇಹವನ್ನೇ ಯುವತಿ ಮದುವೆಯಾಗಿರುವ ಘಟನೆ ನಡೆದಿದೆ.
ಸಕ್ಷಮ್ ಟೇಟ್ ಕೊಲೆಯಾದ ಯುವಕ. ಆತನನ್ನು ಪ್ರೀತಿಸುತ್ತಿದ್ದ ಆಂಚಲ್ ಈಗ ಅತ್ತೆ ಮನೆ ಸೇರಿದ್ದಾಳೆ. ಪ್ರಿಯಕರನ ಮೃತದೇಹವನ್ನೇ ವರಿಸಿದ ಯುವತಿ ತನ್ನ ಕುಟುಂಬವನ್ನು ತೊರೆದಿದ್ದಾಳೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಎರಡು ಸರ್ಕಾರಿ ಬಸ್‌ಗಳು ಮುಖಾಮುಖಿ ಡಿಕ್ಕಿ; 11 ಮಂದಿ ಸಾವು
ಆಂಚಲ್ ತನ್ನ ಸಹೋದರರ ಮೂಲಕ ಸಕ್ಷಮ್ ಟೇಟ್‌ನನ್ನು ಭೇಟಿಯಾದಳು. ಆಗಾಗ್ಗೆ ಆತನ ಮನೆಗೆ ಭೇಟಿ ನೀಡುತ್ತಿದ್ದಳು. ಇಬ್ಬರ ನಡುವೆ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿತು. 3 ವರ್ಷ ಪ್ರೀತಿಯಲ್ಲಿದ್ದ ಜೋಡಿಯ ಮದುವೆಗೆ ಹುಡುಗಿಯ ಮನೆಯವರ ವಿರೋಧವಿತ್ತು. ಜಾತಿ ಬೇರೆ ಬೇರೆ ಎಂಬ ಕಾರಣಕ್ಕೆ ಇಬ್ಬರ ಮದುವೆಗೆ ಹುಡುಗಿ ಕಡೆಯವರು ನಿರಾಕರಿಸಿದ್ದರು.




