February 1, 2026

ಪುತ್ತೂರು: ರಸ್ತೆಯಲ್ಲಿರುವ ಗುಂಡಿಗಳ ನೋಡಿ ಶಾಸಕರ ಆಕ್ರೋಶ: ಖಡಕ್ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ಆರಂಭ

0
image_editor_output_image-1931004347-1764672389663.jpg

ಪುತ್ತೂರು: ರಸ್ತೆಯಲ್ಲಿರುವ ಗುಂಡಿಗಳ ನೋಡಿ ಪುತ್ತೂರು ನಗರಸಭೆ ಕಮಿಷನರ್ ಗೆ ಶಾಸಕರ ಖಡಕ್ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಇದೀಗ ನಗರದ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದೆ.

ಪುತ್ತೂರು ನಗರದ ಸುತ್ತಮುತ್ತ ಭಾರೀ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಹೊಂಡ ಗುಂಡಿಗಳು ನಿರ್ಮಾಣವಾಗಿದ್ದವು. ಇತ್ತೀಚೆಗೆ ಶಾಸಕ ಅಶೋಕ್ ಕುಮಾರ್ ರೈ ನಗರಸಭೆ ಕಮಿಷನರ್ ಗೆ ಗುಂಡಿ ಮುಚ್ಚುವಂತೆ ಸೂಚಿಸಿದ್ದರು, ಶಾಸಕರ ಸೂಚನೆ ಬಳಿಕವೂ ಕಾಮಗಾರಿ ಆರಂಭವಾಗಿರಲಿಲ್ಲ,ಈ ಹಿನ್ನಲೆ ಕಾರಿನಲ್ಲಿ ಹೋಗುವಾಗ ರಸ್ತೆ ಗುಂಡಿಗಳನ್ನು ಕಂಡು ಗರಂ ಆದ ಶಾಸಕರು, ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಎಷ್ಟು ಸಲ ಹೇಳಬೇಕು. ನಾನು ಹೇಳೋ ಭಾಷೆ ನಿಮಗೆ ಅರ್ಥವಾಗುತ್ತೋ ಇಲ್ಲವೋ? ಎಲ್ಲದಕ್ಕೂ ಇಂಜಿನಿಯರ್ ಅಂದ್ರೆ ಕಮಿಷನರ್ ಆಗಿ ನೀವು ಏಕೆ? ಎಲ್ಲದ್ದಕ್ಕೂ ಕೆಳ ಹಂತದ ಅಧಿಕಾರಗಳತ್ತ ಕೈ ತೋರಿಸುತ್ತೀರಾ? ಈ ರಸ್ತೆಯಲ್ಲಿ ಹೋಗುವ ಜನ ಇಲ್ಲಿ ಸಾಯುತ್ತಿದ್ದಾರೆ. ಹೀಗಿರುವಾಗ ಮುಂದಿನ ಮಳೆಗಾಲದವರೆಗೂ ಕಾಲ ಕಳೆಯುತ್ತೀರಾ? ನಾಳೆ ಕೆಲಸ ಆಗದಿದ್ರೆ ಮತ್ತೆ ಏನು ಮಾಡುತ್ತೇನೆ ಅಂತಾ ನೋಡಿ ಎಂದು ಎಚ್ಚರಿಕೆ ನೀಡಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Leave a Reply

Your email address will not be published. Required fields are marked *

error: Content is protected !!