ಬೈಕ್‌ಗೆ ಜೀಪ್ ಢಿಕ್ಕಿ: ಓರ್ವ ಮೃತ್ಯು, ಇನ್ನೋರ್ವ ಗಂಭೀರ
ಬೇಲೂರು: ಬೈಕ್‌ಗೆ ಜೀಪ್ ಡಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರ(ನ.1)ಮುಂಜಾನೆ ಹೊಸಪೇಟೆ ಬಳಿ ಸಂಭವಿಸಿದೆ.
ಅರೇಹಳ್ಳಿ ಹೋಬಳಿಯ ಹಿರೇಹಸಡೆ ಗ್ರಾಮದ ಚಂದನ್(27) ಮೃತಪಟ್ಟ ಯುವಕ. ಗಾಯಗೊಂಡ ಭರತ್‌ನನ್ನು ತಕ್ಷಣ ಹಾಸನದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಚಂದನ್ ಹಾಗೂ ಭರತ್ ಬೇಲೂರಿನಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಹಿರೇಹಸಡೆ ಗ್ರಾಮದ ಕಡೆಗೆ ಮರುಳುತ್ತಿದ್ದಾಗ ಹೊಸಪೇಟೆ ಬಳಿ ಎದುರಿನಿಂದ ಬಂದ ಜೀಪ್ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿಯಾಗಿದೆ.
ಡಿಕ್ಕಿಯಾದ ರಭಸಕ್ಕೆ ಚಂದನ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಭರತ್ ರಸ್ತೆಯ ಬದಿಗೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.




