March 19, 2026

ಪತ್ನಿಯನ್ನು ಕೊಲೆಗೈದು ಮೃತದೇಹದ ಜತೆ ಸೆಲ್ಪಿ ತೆಗೆದು ವಾಟ್ಸ್ ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿದ್ದ ಪತಿಯ ಬಂಧನ

0
image_editor_output_image-1683520541-1764581903694.jpg

ತಮಿಳುನಾಡು : ಪತ್ನಿಯ ಕೊಲೆ ಮಾಡಿ ಮೃತದೇಹದ ಜತೆ ಸೆಲ್ಪಿ ತೆಗೆದು ವಾಟ್ಸ್ ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀಪ್ರಿಯಾ ಮೃತ ಮಹಿಳೆ. ಬಾಲಮುರುಗನ್ ಕೊಲೆಗೈದ ಪತಿ

ಕೊಯಮತ್ತೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಪ್ರಿಯಾ, ಬಾಲಮುರುಗನ್‌ನಿಂದ ಬೇರ್ಪಟ್ಟಿದ್ದರು. ಭಾನುವಾರ(ನ. 30) ಮಧ್ಯಾಹ್ನ ಬಾಲಮುರುಗನ್ ಕತ್ತಿಯೊಂದನ್ನು ಬಟ್ಟೆಯಲ್ಲಿ ಅಡಗಿಸಿಕೊಂಡು ಹಾಸ್ಟೆಲ್‌ಗೆ ಬಂದಿದ್ದ. ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಬಾಲಮುರುಗನ್ ಕತ್ತಿ ಹೊರತೆಗೆದು ಆಕೆಯನ್ನು ಕಡಿದು ಕೊಂದಿದ್ದಾನೆ ಎನ್ನಲಾಗಿದೆ.

ಬಳಿಕ ಆಕೆಯ ಶವದೊಂದಿಗೆ ಸೆಲ್ಪಿ ತೆಗೆದುಕೊಂಡು ಅದನ್ನು ತನ್ನ ವಾಟ್ಸಾಪ್ ಸ್ಟೇಟಸ್ ಗೆ ಹಾಕಿ, ಆಕೆ ತನಗೆ ದ್ರೋಹ ಮಾಡಿದ್ದಾಳೆಂದು ಬರೆದುಕೊಂಡಿದ್ದ ಎಂದು ತಿಳಿದುಬಂದಿದೆ. ಬಾಲಮುರುಗನ್ ಸ್ಥಳದಲ್ಲೇ ಇದ್ದು ಪೊಲೀಸರು ಬರುವವರೆಗೂ ಕಾಯುತ್ತಿದ್ದ ಎನ್ನಲಾಗಿದೆ.

ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದು, ಆತನಲ್ಲಿದ್ದ ಮಾರಕಾಸ್ತ್ರ ವಶಪಡಿಸಿಕೊಂಡಿದ್ದಾರೆ. ಮಹಿಳೆಗೆ ಬೇರೊಬ್ಬ ಪುರುಷನೊಂದಿಗೆ ಸಂಬಂಧವಿದೆ ಎಂದು ಶಂಕಿಸಿ ಈ ಕೃತ್ಯ ಎಸಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!