September 23, 2026

ಖತರ್: ಕಾಣೆಯಾದ ಬೆಕ್ಕನ್ನು ಹುಡುಕಿದವರಿಗೆ 26.28 ಲಕ್ಷ ರೂ. ಬಹುಮಾನ ಘೋಷಣೆ

0
image_editor_output_image1608414799-1790147628218

ಖತರ್: ಕುಟುಂಬವೊಂದು ಕಾಣೆಯಾದ ತಮ್ಮ ಸಾಕು ಬೆಕ್ಕನ್ನು ಪತ್ತೆಹಚ್ಚಿ ಕೊಡುವವರಿಗೆ 1 ಲಕ್ಷ ಖತರ್‌ ರಿಯಾಲ್‌ (ಸುಮಾರು 26.28 ಲಕ್ಷ ರೂ.) ಬಹುಮಾನ ಘೋಷಿಸಿದೆ.

‘ರೆಕ್ಸ್’ ಎಂಬ 12ರಿಂದ 13 ವರ್ಷ ವಯಸ್ಸಿನ ಕಿತ್ತಳೆ ಬಣ್ಣದ ಗಂಡು ಬೆಕ್ಕು ಮಾರ್ಚ್ 21ರಂದು ಕೊನೆಯ ಬಾರಿ ಕಾಣಿಸಿಕೊಂಡಿತ್ತು. ಆರು ತಿಂಗಳಿಗೂ ಹೆಚ್ಚು ಸಮಯದ ಹಿಂದೆ ಅಲ್ ರಯಾನ್ನ ಮುರೈಖ್ ನಾರ್ತ್ ನ ಅಲ್ ಫುರುಸಿಯಾ ಬೀದಿಯಲ್ಲಿ ಅದು ಕಾಣೆಯಾಗಿತ್ತು.

ರೆಕ್ಸ್ ನ ಚಿತ್ರಗಳು ಹಾಗೂ ಬಹುಮಾನದ ಕುರಿತು ಪ್ರಕಟಿಸಲಾದ ಇತ್ತೀಚಿನ ಜಾಹೀರಾತು ಖತರ್ ನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

Leave a Reply

Your email address will not be published. Required fields are marked *

error: Content is protected !!