ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಢಿಕ್ಕಿ ಹೊಡೆದ ಕಾರು
ಸುಳ್ಯ: ಕಾರು ಸಂಚರಿಸುತ್ತಿದ್ದ ವೇಳೆ ಕಾಡು ಹಂದಿಯೊಂದು ದಿಢೀರ್ ಆಗಿ ರಸ್ತೆಗೆ ಜಿಗಿದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಇಳಿದ ಘಟನೆ ಸುಳ್ಯ ಬಂದಡ್ಕ ಅಂತಾರಾಜ್ಯ ರಸ್ತೆಯ ಕೋಲ್ಚಾರಿನ ಕಣಕ್ಕೂರು ಸಮೀಪ ರವಿವಾರ ಸಂಭವಿಸಿದೆ.
ಸುಳ್ಯದಿಂದ ಕೇರಳದ ಬಂದಡ್ಕ ಕಡೆಗೆ ಕಾರು ಸಂಚರಿಸುತ್ತಿದ್ದ ವೇಳೆ ಬೆಳಗ್ಗಿನ ಜಾವ ಕಾಡು ಹಂದಿಯೊಂದು ಏಕಾಏಕಿ ಅಡ್ಡ ಬಂದಿದ್ದು, ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಯಿಂದ ಮೋರಿಯ ಕೆಳಗೆ ಉರುಳಿದೆ. ಕಾರಿನಲ್ಲಿ ಚಾಲಕ ಒಬ್ಬರೇ ಇದ್ದು, ಸಣ್ಣ ಪುಟ್ಟಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದೆ.




