ಉಡುಪಿ: ತಾಯಿ ಹೊಸ ಮೊಬೈಲ್ ಕೊಡಿಸಿಲ್ಲ ಎಂಬ ಕಾರಣಕ್ಕೆ ಬಾಲಕ ಆತ್ಮಹತ್ಯೆ
ಉಡುಪಿ: ತಾಯಿ ಹೊಸ ಮೊಬೈಲ್ ಕೊಡಿಸಿಲ್ಲ ಎಂಬ ಕಾರಣಕ್ಕೆ ಬಾಲಕ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಕಾರ್ಕಳದಲ್ಲಿ ನಡೆದಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿ ಸುಮಂತ್ ನಂದಳಿಕೆ (16) ಜೀವಾಂತ್ಯ ಕಂಡ ಯುವಕ.
ಸುಮಂತ್‌ನ ಮೊಬೈಲ್ ಹಾಳಾಗಿದ್ದು, ಅದನ್ನು ದುರಸ್ತಿಗೆ ನೀಡಲಾಗಿತ್ತು. ಈತ ಹೊಸ ಮೊಬೈಲ್ ಕೊಡಿಸಬೇಕೆಂದು ಅಮ್ಮನ ಬಳಿ ಹಠ ಹಿಡಿದಿದ್ದ. ಹೊಸ ಮೊಬೈಲ್ ಕೊಡಿಸುವುದಾಗಿ ಅಮ್ಮ ಭರವಸೆ ನೀಡಿದ್ದರು, ಇದರಿಂದ ಸಮಾಧಾನಗೊಳ್ಳದ ಸುಮಂತ್, ನೀರು ನಿಂತಿದ್ದ ಕಲ್ಲು ಕೋರೆಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ.




