May 26, 2026

RSS ನಾಯಕನ ಪುತ್ರನನ್ನು ಗುಂಡಿಟ್ಟು ಹತ್ಯೆ

0
image_editor_output_image111862907-1763358558787.jpg

ಚಂಡೀಗಢ: ಆರ್‌ಎಸ್‌ಎಸ್‌ ನಾಯಕರೊಬ್ಬನ ಪುತ್ರನನ್ನು ಗುಂಡಿಟ್ಟು ಕೊಂದ ಘಟನೆ ಪಂಜಾಬ್‌ನ ಫಿರೋಜ್‌ಪುರದಲ್ಲಿ ಶನಿವಾರ ನಡೆದಿದೆ.

ಮೃತನನ್ನು ನವೀನ್‌ ಅರೋರಾ (32) ಎಂದು ಗುರುತಿಸಲಾಗಿದೆ. ನವೀನ್ ಅವರ ತಂದೆ, ಬಲದೇವ್ ರಾಜ್ ಅರೋರಾ ಅವರು ಆರ್‌ಎಸ್‌ಎಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಾ.ಸಾಧು ಚಾಂದ್‌ ಚೌಕ್‌ನಲ್ಲಿರುವ ತಮ್ಮ ಅಂಗಡಿಯಿಂದ ಮನೆಯೆಡೆಗೆ ತೆರಳುತ್ತಿದ್ದ ನವೀನ್‌ ಮೇಲೆ, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯನ್ನು ಖಂಡಿಸಿರುವ ಬಿಜೆಪಿ ನಾಯಕರು, ಆಪ್‌ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದೆ.

Leave a Reply

Your email address will not be published. Required fields are marked *

error: Content is protected !!