ಮಹಿಳಾ ಏಕದಿನ ವಿಶ್ವಕಪ್ 2025: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 52 ರನ್ ಗಳ ಜಯ
ಮುಂಬೈ: ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ವನಿತೆಯರ ವಿಶ್ವಕಪ್ 2025ರ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 52 ರನ್ ಗಳ ಅಂತರದಲ್ಲಿ ಜಯ ಗಳಿಸಿದೆ.
ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿರುವ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 299 ರನ್‌ಗಳ ಗುರಿಯನ್ನು ನೀಡಿದೆ.
ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ 45 ರನ್ ಗಳಿಸಿದರೆ, ಶಫಾಲಿ ವರ್ಮಾ 87 ರನ್ ಗಳಿಸಿ ಮಹತ್ವದ ಪಂದ್ಯದಲ್ಲಿ ತಂಡದ ಕೈಹಿಡಿದರು. ಇನ್ನುಳಿದಂತೆ ಜೆಮಿಮಾ ರೊಡ್ರಿಗ್ಸ್ 24, ನಾಯಕಿ ಹರ್ಮನ್‌ಪ್ರೀತ್ ಕೌರ್ 20, ಅಮನ್‌ಜೋತ್ ಕೌರ್ 12, ರಿಚಾ ಘೋಷ್ 34, ದೀಪ್ತಿ ಶರ್ಮಾ 58 ರನ್ ಹಾಗೂ ರಾಧಾ ಯಾದವ್ ಅಜೇಯ 3 ರನ್ ಕಲೆ ಹಾಕಿದರು.
ದಕ್ಷಿಣ ಆಫ್ರಿಕಾ ಪರ ಅಯಬೋಂಗ ಖಾಕ 3 ವಿಕೆಟ್, ಎಮ್‌ಲಾಬಾ, ನದೈನ್ ಡಿ ಕ್ಲೆರ್ಕ್ ಹಾಗೂ ಷ್ಲೋ ಟೈರನ್ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತ ತಂಡದ ಪರ ಆಲ್ ರೌಂಡರ್ ಪ್ರದರ್ಶನ ನೀಡಿದ ದೀಪ್ತಿ ಶರ್ಮಾ ಆಕರ್ಷಕ ಅರ್ಧಶತಕ ಮತ್ತು ವಿಕೆಟ್ 5 ಕೀಳುವ ಮೂಲಕ ತಂಡಕ್ಕೆ ಬಲ ಪ್ರದರ್ಶನ ನೀಡಿದರು. ದಕ್ಷಿಣ ಆಫ್ರಿಕಾ ಪರ ಉತ್ತರ ಬ್ಯಾಟಿಂಗ್ ಪ್ರದರ್ಶನ ನೀಡಿದ ವೋಲ್ವವರ್ಟ್ ಶತಕ ಈ ಮೂಲಕ ವ್ಯರ್ಥವಾಯಿತು.




