February 3, 2026

ಲಘುವಾಗಿ ಕಾಂಗ್ರೆಸ್ ಬಗ್ಗೆ ಯಾರೂ ಮಾತನಾಡಬಾರದು: ನಳಿನ್ ಗೆ ತಿರುಗೇಟು ನೀಡಿದ ರೈ

0
IMG-20211225-WA0029.jpg

ವಿಟ್ಲ: ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಬಲ ಸಾಭೀತಾಗಿದೆ. ಪಕ್ಷ ವಿಭಜನೆ ಆದರೂ ಮತ್ತೆ ಪುಟಿದು ನಿಲ್ಲುವ ಕಾರ್ಯವಾಗಿದೆ. ಲಘುವಾಗಿ ಕಾಂಗ್ರೆಸ್ ಬಗ್ಗೆ ಯಾರೂ ಮಾತನಾಡಬಾರದು. ದೇಶದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಅವರು ಮಾಧ್ಯಮಗಳ ಜೆತೆಗೆ ಮಾತನಾಡಿ ಅಧಿಕಾರ ಹಾಗೂ ಹಣದ ಮದ, ದುರಹಂಕಾರ ಮಾತುಗಳನ್ನು ಆಡಿಸುತ್ತಿದೆ. ಪಟ್ಟಾದಾರ ಕೃಷಿಕರ ಕುಟುಂಬಗಳ ಹೆಚ್ಚಳಕ್ಕೆ ಕಾಂಗ್ರೆಸ್ ಕಾರಣವಾಗಿದೆ. ದೇಶದಲ್ಲಿ ಬಿಜೆಪಿ ಇಲ್ಲದ ರಾಜ್ಯಗಳು ಇದೆ, ಹಾಗೆಂದು ಕಾಂಗ್ರೆಸ್ ಇಲ್ಲದ ರಾಜ್ಯವಿಲ್ಲ. ವಿಟ್ಲ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳನ್ನು ಕಾಂಗ್ರೆಸ್ ನೀಡಿದ್ದು, ಗೆಲ್ಲುವ ಭರವಸೆ ಇದೆ. ದುರಹಂಕಾರಿಗಳಿಗೆ ಜನ ಸರಿಯಾದ ಪಾಠ ಮಾಡಬೇಕು ಎಂದರು.

ಜನರಿಗೆ ಸಮಸ್ಯೆಯಾಗುವಂತಹ ೪೦೦ಕೆ ವಿ ಉಡುಪಿ ಕಾಸರಗೋಡು ವಿದ್ಯುತ್ ಮಾರ್ಗದ ಬಗ್ಗೆ ವಿಧಾನ ಪರಿಷತ್ ನ ಶೂನ್ಯ ವೇಳೆಯಲ್ಲಿ ಎಸ್. ಆರ್. ಪಾಟೀಲ್ ಮಾತಾಡಿದ್ದಾರೆ. ಯಾವುದೇ ಕಾರಣಕ್ಕೂ ಆ ಯೋಜನೆ ಬಂಟ್ವಾಳ ತಾಲೂಕಿನಲ್ಲಿ ಹೋಗಬಾರದು. ೪೦೦ಕೆ. ವಿ. ವಿಚಾರದಲ್ಲಿಡಿ. ೨೮ ರಂದು ಧರಣಿಯನ್ನು ಆರಂಭಿಸಲಾಗುತ್ತಿದೆ ಎಂದರು.

ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ ಕೆ. ಬಿ., ಎಂ. ಎಸ್. ಮಹಮ್ಮದ್, ಚಂದ್ರಹಾಸ ಕರ್ಕೇರ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಸದಾಶಿವ ಅಳಿಕೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!