ವಿಟ್ಲ: ದೇಶ ವಿರೋಧಿ ಕೃತ್ಯ ಮಾಡುವ ಸಂಘಟನೆಗಳ ನಿಷೇಧ: ಗೃಹ ಸಚಿವ ಅರಗ ಜ್ಞಾನೇಂದ್ರ
ವಿಟ್ಲ: ದೇಶ ವಿರೋಧಿ ಕೃತ್ಯ ಮಾಡುತ್ತಿದ್ದರೆ, ಕಾನೂನು ಸುವ್ಯವಸ್ಥೆಗೆ ಸದಾ ಕಾಲ ಅಡ್ಡಿ ಪಡಿಸುತ್ತಿದ್ದರೆ ಅಂತಹ ಸಂಘಟನೆಗಳನ್ನು ಮುಲಾಜಿಲ್ಲದೆ ನಿಷೇಧ ಮಾಡ್ತೇವೆ. ಅದರ ಚಟುವಟಿಕೆಯಲ್ಲಿ ಒಳಗೊಳ್ಳುವ ವ್ಯಕ್ತಿಗಳ ಮೇಲೆ ಕಾನೂನು ಕಾಯ್ದೆ ಕ್ರಮವನ್ನೂ ತೆಗೆದುಕೊಳ್ಳತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಖಾಸಗೀ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೆತೆಗೆ ಮಾತನಾಡಿದ ಅವರು ಆನ್ ಲೈನ್ ಬಿಡ್ಡಿಂಗ್, ಸೈಬರ್ ಕ್ರೈಮ್ ಬಗ್ಗೆ ವಿಶೇಷವಾದ ಕ್ರಮವನ್ನು ತಂದಿದ್ದೇವೆ. ಹಿರಿಯ ವಕೀಲರನ್ನು ಕರೆಸಿ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡುವ ಜತೆಗೆ ಕಾಯ್ದೆಯನ್ನು ನಿಪ್ರಯೋಜಕ ಮಾಡಬೇಕೆಂಬ ಹೋರಾಟ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಒಳ್ಳೆಯ ಕಾರ್ಯಕ್ಕಾಗಿ ಕಾಯ್ದೆ ತರಲಾಗಿದೆ ಎಂಬುದನ್ನು ತಿಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಬಂದು ಇದುವರೆಗೆ ಗುರುತಿಸಲಾಗದ ನ್ಯೂನತೆಗಳನ್ನು ಗುರುತಿಸಿ ಪೋಲೀಸರ ಕೈ ಬಲ ಪಡಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಿದೆ. ಔರಾದ್ಕರ್ ವರದಿ ನೀಡಿದ್ದೇ ೨೦೧೬ರಲ್ಲಿ, ಅದನ್ನು ಆಗಿನ ಸರ್ಕಾರ ಪ್ರಾಸ್ಪೆಕ್ಟಿವ್ ಆಗಿ ತೆಗೆದುಕೊಂಡಿದ್ದರಿಂದ ಅವತ್ತಿನಿಂದ ಇಂದಿನವರಿಗೆ ಸಿಕ್ಕಿಲ್ಲ. ವಂಚನೆಗೊಳಗಾದ ಕಾನ್ಸ್ಟೇಬಲ್ ನಿಂದ ಹಿಡಿದು ಸಬ್ ಇನ್ಪೆಕ್ಟರ್ ವರೆಗೆ ಕೆಲವು ಅಲೊವೆನ್ಸ್ ಹೆಚ್ಚು ಮಾಡಿ ಕೊಡುತ್ತಿದ್ದೇವೆ. ಅದನ್ನು ಕೊಡುವ ಸಾದ್ಯತೆಯ ಬಗ್ಗೆ ಸರ್ಕಾರದ ಆರ್ಥಿಕ ಇಲಾಖೆ ಮೂಲಕ ಚರ್ಚೆ ಮಾಡುತ್ತಿರುವೆ ಮತ್ತು ಹೋರಾಟ ಮಾಡುತ್ತಿರುವೆ ಎಂದರು.
ಪೋಲೀಸ್ ಇಲಾಖೆಯಲ್ಲಿ ಈಗಲೂ ಕೂಡಾ ೪೦ರಿಂದ ೪೫ಸಾವಿರ ವೇತನ ಸಿಗುತ್ತಿದೆ. ಯಾವ ಐಟಿ ಬಿಟಿಯಲ್ಲೂ ಸಿಗುತ್ತಿಲ್ಲ. ಪೋಲೀಸ್ ಇಲಾಖೆಯಿಂದ ಸಾಕಷ್ಟು ನೇಮಕಾತಿಯನ್ನು ಮಾಡುತ್ತಿದ್ದು, ಒಂದೇ ವರ್ಷದಲ್ಲಿ ೪ಸಾವಿರ ಕಾನ್ ಸ್ಟೇಬಲ್ ಹುದ್ದೆಯನ್ನು ತುಂಬಿದ್ದೇವೆ. ಖಾಲಿ ಇದ್ದ ೯೫೦ಸಬ್ ಇನ್ ಸ್ಪೆಕ್ಟರ್ ಹುದ್ದೆಯನ್ನೂ ಸಂಪೂರ್ಣ ತುಂಬಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಜನ ಪೊಲೀಸ್ ಇಲಾಖೆಗೆ ಅರ್ಜಿ ಹಾಕುತ್ತಿಲ್ಲ. ಹೊರ ಜಿಲ್ಲೆಯಿಂದ ಬಂದವರು ಊರಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದು, ಅವರಿಗೆ ವರ್ಗಾವಣೆ ನೀಡಿದಲ್ಲಿ ಕರಾವಳಿಯಲ್ಲಿ ಜನ ಇಲ್ಲದಂತಾಗುತ್ತದೆ. ತುಳು ಹಾಗೂ ಬ್ಯಾರಿ ಭಾಷೆ ಅರಿತ ಹೆಚ್ಚು ಜನ ಯುವಕರು ಇಲಾಖೆಗೆ ಬೇಕಾಗಿದ್ದಾರೆ ಎಂದರು.
ಎಸ್ ಪಿ ಕಛೇರಿ ಪುತ್ತೂರು ಬರಬೇಕೆಂಬ ನಿಟ್ಟಿನಲ್ಲಿ ಪುತ್ತೂರು ಶಾಸಕರ ಬಹಳ ದೊಡ್ಡ ಆಗ್ರಹ ಇದೆ. ಸ್ಥಳಾಂತರಕ್ಕೆ ತುಂಬಾ ಆರ್ಥಿಕ ವ್ಯವಸ್ಥೆ ಬೇಕಾಗಿದೆ. ಕೇವಲ ಎಸ್ ಪಿ ಕಛೇರಿಯಲ್ಲ, ಡಿಆರ್ ಸೇರಿ ಬೇರೆ ಬೇರೆ ವ್ಯವಸ್ಥೆಗಳೆಲ್ಲಾ ಬರಬೇಕಾಗಿದೆ. ಅದರ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಕೋಮು ಪ್ರಚೋದನೆ ಮಾಡಿದರೆ ಓಟು ಬರುತ್ತದೆ ಎನ್ನುವವರಿಗೆ ಎಂಥ ಮಾಡ್ಲಿಕೆ ಆಗುತ್ತದೆ. ನಿನ್ನೆ ಮತಾಂತರ ನಿಷೇಧ ಕಾಯ್ದೆಯನ್ನು ಎಲ್ಲಾ ಮತಗಳಿಗೂ ಪ್ರಯೋಜನವಾಗುವ ರೀತಿ ತಂದಿದ್ದೇವೆ. ಇದು ಯಾವ ಧರ್ಮದ ವಿರುದ್ಧವೂ ಅಲ್ಲ. ಅದೂ ಕೂಡಾ ವಿರೋಧವಾಗುತ್ತಿದೆ. ಇದರ ಹಿನ್ನಲೆ ಓಟ್ ಬ್ಯಾಂಕ್ ಅಷ್ಟೇ ಎಂದರು.