ಹೆಬ್ಬಾವನ್ನು ಬೇಯಿಸಿ ತಿಂದ ಆರೋಪ: ಇಬ್ಬರು ಆರೋಪಿಗಳ ಬಂಧನ
ಕೇರಳ: ಹೆಬ್ಬಾವನ್ನು ಬೇಟೆಯಾಡಿ ಅದರ ಮಾಂಸವನದನು ಬೇಯಿಸಿ ತಿಂದ ಆರೋಪದ ಮೇಲೆ ಅರಣ್ಯಾಧಿಕಾರಿಗಳು ಕೇರಳದಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಪ್ರಮೋದ್ (40), ಬಿನೀಶ್ (37) ಬಂಧಿತ ಆರೋಪಿಗಳು. ಬುಧವಾರ ಸಂಜೆ ಆರೋಪಿಗಳು ತಮ್ಮ ಮನೆಗಳ ಸಮೀಪದ ರಬ್ಬರ್ ತೋಟದಲ್ಲಿ ಹೆಬ್ಬಾವು ಬೇಟೆಯಾಡಿ, ನಂತರ ಪ್ರಮೋದ್ ಅವರ ಮನೆಯಲ್ಲಿ ಅದರ ಮಾಂಸದಿಂದ ಕರಿ ತಯಾರಿಸಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ಪ್ರಮೋದ್ ಮನೆಗೆ ದಾಳಿ ನಡೆಸಿದ್ದರು. ಈ ವೇಳೆ ಹೆಬ್ಬಾವು ಪದಾರ್ಥ, ಅದರ ಮೂಳೆಗಳು, ಪಾತ್ರೆಗಳು ಲಭಿಸಿತ್ತು. ಪ್ರಮೋದ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಲಭಿಸಿದ ಮಾಹಿತಿಯಂತೆ ಬಿನೀಶ್ ಸೆರೆಯಾಗಿದ್ದಾನೆ.





