ಬ್ರಹ್ಮರಕೂಟ್ಟು ಟೋಲ್ ಪ್ಲಾಜಾದ ರಸ್ತೆ ಸರಿಮಾಡಿ, ಇಲ್ಲವೇ ಬಂದ್ ಮಾಡಿ: ವಾಹನ ಸವಾರರ ಆಕ್ರೋಶ
ಬಂಟ್ವಾಳ: ಮೂಲಭೂತ ಸೌಕರ್ಯಗಳ ಕೊರತೆಯಿಂದ ಕೊರಗುತ್ತಿರುವ ಬ್ರಹ್ಮರಕೂಟ್ಟು ಟೋಲ್ ಪ್ಲಾಜಾಕ್ಕೆ ಕಾಯಕಲ್ಪ ಒದಗಿಸಿ, ಇಲ್ಲವೇ ಬಂದ್ ಮಾಡಿ ಎಂಬುದಾಗಿ ಜನಾಕ್ರೋಶ ವ್ಯಕ್ತವಾಗಿದೆ.
ಟೋಲ್ ಪ್ಲಾಜಾದ ಬಳಿ ಹಾಗೂ ಸರ್ವೀಸ್ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು,ಗುಂಡಿಗೆ ಬಿದ್ದ ವಾಹನಗಳು ಟೋಲ್ ನೀಡಿ ಬಳಿಕ ಗ್ಯಾರೇಜ್ ನತ್ತ ಮುಖ ಮಾಡಬೇಕಾದ ಸ್ಥಿತಿ ಇಲ್ಲಿದೆ. ಕತ್ತಲಲ್ಲಿ ಟೋಲ್ ಸಂಗ್ರಹ ಮಾಡುವ ರಾಜ್ಯದ ಪ್ರಥಮ ಟೋಲ್ ಸಂಗ್ರಹ ಕೇಂದ್ರವಾಗಿರಬಹುದು ಎಂಬುದು ಅತ್ಯಂತ ನೋವಿನ ಸಂಗತಿಯಾಗಿದೆ.