March 4, 2026

ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಮೀನುಗಾರ ಮೃತ್ಯು

0
image_editor_output_image1329244689-1757668794202.jpg

ಉಡುಪಿ: ಮೀನುಗಾರಿಕೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಸೆಪ್ಟೆಂಬರ್ 10 ರಂದು ಮಲ್ಪೆ ಲೈಟ್ ಹೌಸ್ ಬಳಿ ನಡೆದಿದೆ.

ಸಾಸ್ತಾನ ಕೋಡಿತಲೆ ನಿವಾಸಿ ರಾಮ ಖಾರ್ವಿ ಮೃತಪಟ್ಟ ವ್ಯಕ್ತಿ. ಇವರ ಮೃತದೇಹವು ನಿನ್ನೆ(ಸೆ.11) ಮಲ್ಪೆ ಲೈಟ್ ಹೌಸ್‌ ಬಳಿ ಪತ್ತೆಯಾಗಿದೆ. ಅವರು ಸುಮಾರು 25 ರಿಂದ 30 ವರ್ಷದಿಂದ ಒಬ್ಬರೇ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳುತಿದ್ದರು.

ಎಂದಿನಂತೆ ಅಂದು ಕೂಡ ಮೀನುಗಾರಿಕೆಗೆ ತೆರೆಳಿದ್ದು ಮದ್ಯಾಹ್ನವಾದರೂ ಮನೆಗೆ ಬಾರದಿದ್ದ ಕಾರಣ ಅವರ ಮಗ ಅವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ.

Leave a Reply

Your email address will not be published. Required fields are marked *

error: Content is protected !!