March 22, 2026

ನಗರಸಭೆ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಹೃದಯಾಘಾತದಿಂದ ನಿಧನ

0
IMG-20211225-WA0002.jpg

ಶಿರಾ: ಡಿ.27ರಂದು ನಡೆಯುವ ನಗರಸಭೆ ಚುನಾವಣೆಯಲ್ಲಿ 21ನೇ ವಾರ್ಡ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಾಂದ್ ಪಾಷ (72) ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ಇವರು ಶಿರಾ ನಗರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಜಾಮಿಯಾ ಮಸೀದಿ ಮುತ್ವಲ್ಲಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನಟರಾಜ್ ಬೀಡಿ ಮಾಲೀಕರಾಗಿದ್ದು, ಆರ್.ರೆಹಾನ್ ಶಿಕ್ಷಣ ಸಂಸ್ಥೆಯ ಮೂಲಕ ಜನಪರ ಸೇವೆ ಮಾಡುತ್ತಿದ್ದರು.

ಮರಣದಿಂದಾಗಿ ನಗರಸಭೆಯ 21ನೇ ವಾರ್ಡ್‌ನ ಮತದಾರರಲ್ಲಿ ಚುನಾವಣೆಯ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಚುನಾವಣೆ ಆಯೋಗದಿಂದ ಮಾಹಿತಿ ಪಡೆದು ಚುನಾವಣೆ ಮುಂದೂಡಬೇಕೆ, ಬೇಡವೆ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!