February 3, 2026

ಚಿಕ್ಕಮಗಳೂರು: ಚಲಿಸುತ್ತಿದ್ದ ಬಸ್ ನಲ್ಲಿ ಹೃದಯಾಘಾತ:
ಬಸ್ ಕಂಡಕ್ಟರ್ ನಿಧನ

0
n34449188616404117335010c6d60e9ca0fbf813ff3c3675e076341b7491a0ddd16a4412ffff93e5172123e.jpg

ಚಿಕ್ಕಮಗಳೂರು: ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ನಿರ್ವಾಹಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲಯಮಾರುತ ಬಳಿ ಸಂಭವಿಸಿದೆ.

43 ವರ್ಷದ ವಿಜಯ್ ಹೃದಯಾಘಾತಕ್ಕೀಡಾದ ನಿರ್ವಾಹಕ.

ವಿಜಯ್ ಚಿಕ್ಕಮಗಳೂರು-ಉಡುಪಿ ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಬೆಳಿಗ್ಗೆ ಚಿಕ್ಕಮಗಳೂರಿನಿಂದ ಉಡುಪಿ ಕಡೆಗೆ ಬಸ್ ಹೊರಟಿದ್ದು, ಮಾರ್ಗ ಮಧ್ಯೆಯೇ ನಿರ್ವಾಹಕ ವಿಜಯ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಬಸ್ ನಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!