ಪೋಪ್ ಫ್ರಾನ್ಸಿಸ್ ನಿಧನ
ರೋಮ್: ಕ್ರೈಸ್ತರ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ಕೊನೆಯುಸಿರೆಳೆದಿದ್ದಾರೆ. 88 ವರ್ಷ ಪೋಪ್ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿ ಕೆಲದಿನಗಳ ಹಿಂದೆ ಡಿಸ್ಚಾರ್ಜ್ ಆಗಿ ವಿಶ್ರಾಂತಿ ಪಡೆಯುತ್ತಿದ್ದರು.
ಪೋಪ್ ನಿಧನದ ಬಗ್ಗೆ ವ್ಯಾಟಿಕನ್ ನ್ಯೂಸ್ ಅಧಿಕೃತಪಡಿಸಿದೆ. ಕಳೆದ ಫೆ.14 ರಂದು ಅವರು ಶ್ವಾಸಕೋಶದ ಸೋಂಕಿನ ಹಿನ್ನೆಲೆ ಅಗೊಸ್ಟೇನಿಯೋ ಜೆಮಿಲಿ ಪಾಲಿಕ್ಲೀನಿಕ್ ಆಸ್ಪತ್ರೆಗೆ ದಾಖಲಾಗಿದ್ದರು. 38 ದಿನಗಳ ನಿರಂತರ ಚಿಕಿತ್ಸೆಯ ನಂತರ ಗುಣಮುಖರಾಗಿ ಡಿಸ್ಚಾರ್ಜ್ ಆಗಿ ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ಇಂದು ಬೆಳಗ್ಗೆ 7:35 ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ನ್ಯೂಸ್ ಅಧಿಕೃತಪಡಿಸಿದೆ. ಅವರ ನಿಧನದ ಸುದ್ದಿ ತಿಳಿದು ಪ್ರಪಂಚದಾದ್ಯಂತ ಕೋಟ್ಯಂತರ ಕ್ಯಾಥೋಲಿಕರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.





