ಉಪ್ಪಿನಂಗಡಿ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು: ಮನೆ ಮಂದಿ ಈಸ್ಟರ್ ಹಬ್ಬಕ್ಕೆಂದು ಚರ್ಚ್ ಗೆ ತೆರಳಿದ್ದ ವೇಳೆ ಘಟನೆ
ಉಪ್ಪಿನಂಗಡಿ: ಮನೆ ಮಂದಿ ಈಸ್ಟರ್ ಹಬ್ಬಕ್ಕೆಂದು ಚರ್ಚ್ ಗೆ ತೆರಳಿದ್ದ ವೇಳೆ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ಎಪ್ರಿಲ್ 19ರಂದು ರಾತ್ರಿ ನಡೆದಿದೆ.
ಹೊಸಮಜಲು ನಿವಾಸಿ, ಕೃಷಿಕ ಸಿ.ಎ.ಅಬ್ರಹಾಂ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಅಬ್ರಹಾಂ ಮತ್ತು ಅವರ ಪತ್ನಿ ಲೀಲಾತಂಬಿ, ಪುತ್ರ ಅನಿಲ್ ಅಬ್ರಹಾಂ ಮತ್ತು ಇಬ್ಬರು ಮೊಮ್ಮಕ್ಕಳು ಶನಿವಾರ ಸಂಜೆ 6.30ಕ್ಕೆ ಮನೆಗೆ ಬೀಗ ಈಸ್ಟರ್ ಹಬ್ಬದ ಕಾರ್ಯಕ್ರಮಕ್ಕಾಗಿ ಕೊಣಾಲು ಚರ್ಚ್ ಗೆ ತೆರಳಿದ್ದರು.




