ದ.ಕ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನಾದ್ಯಂತ ಆ.8ರಂದು ಶಾಲಾ-ಕಾಲೇಜ್ ಗಳಿಗೆ ರಜೆ
ಪುತ್ತೂರು : ಭಾರಿ ಮಳೆ ಹಾಗೂ ಹವಾಮಾನ ಇಲಾಖೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನಾದ್ಯಂತ ಆ.8ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗದ ತಹಶೀಲ್ದಾರರ ಮನವಿ ಪ್ರಕಾರವಾಗಿ, ಪುತ್ತೂರು ತಾಲೂಕು, ಬೆಳ್ತಂಗಡಿ ತಾಲೂಕು, ಸುಳ್ಯ ತಾಲೂಕು, ಕಡಬ ತಾಲೂಕುಗಳ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಮತ್ತು ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ & ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜು, ಎಲ್ಲಾ ITI ಮತ್ತು Diploma ಕಾಲೇಜುಗಳು 12ನೇ ತರಗತಿ ವರೆಗೆ ರಜೆ ಘೋಷಿಸಲಾಗಿದೆ.




