March 13, 2026

ಉಪ್ಪಿನಂಗಡಿ: ಕಾರು-ರಿಕ್ಷಾ ನಡುವೆ ಭೀಕರ ಅಪಘಾತ: ರಿಕ್ಷಾ ಚಾಲಕ ಸಾವು

0
image_editor_output_image-1814996467-1745222143604.jpg

ಉಪ್ಪಿನಂಗಡಿ : ಕಾರು – ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿ ರಿಕ್ಷಾ ಚಾಲಕ ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ ಸಮೀಪದ ಪೆರಿಯಶಾಂತಿ ಎಂಬಲ್ಲಿ ನಿನ್ನೆ (ಏ.20) ರಾತ್ರಿ ಸಂಭವಿಸಿದೆ.

ಅಡೋಳೆ ಸಮೀಪದ ಪೇರಮಜಲು ನಿವಾಸಿ, ಅಟೋ ಚಾಲಕ ಪ್ರಭಾಕರ (40) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಅಟೋ ಚಾಲಕ ಪ್ರಭಾಕರ ನೆಲ್ಯಾಡಿ ಯಿಂದ ಗುಂಡ್ಯದತ್ತ ಪ್ರಯಾಣಿಸುತ್ತಿದ್ದಾಗ ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾದಿಂದ ರಸ್ತೆಗೆ ಎಸೆಯಲ್ಪಟ್ಟ ಚಾಲಕ ಪ್ರಭಾಕರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಕ್ಷಣವೇ ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!