ಮಂಗಳೂರು: ಕೆಂಜಾರ್ ಸಮೀಪ ಅಪಘಾತ: ಪೆರ್ಮುದೆಯ ಯುವಕ ಸಾವು
ಮಂಗಳೂರು: ಕೆಂಜಾರ್ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಪೆರ್ಮುದೆಯ 27 ವರ್ಷದ ಜೋಶ್ವಾ ಪಿಂಟೋ ಸಾವನ್ನಪ್ಪಿದ್ದಾರೆ.
ವರದಿಗಳ ಪ್ರಕಾರ, ಜೋಶ್ವಾ ಅವರು ಈಸ್ಟರ್ ವಸ್ತುಗಳನ್ನು ಖರೀದಿಸಿ ಮಂಗಳೂರಿನಿಂದ ಸ್ನೇಹಿತರೊಂದಿಗೆ ಹಿಂತಿರುಗುತ್ತಿದ್ದಾಗ ರಸ್ತೆಯಲ್ಲಿದ್ದ ಗುಂಡಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ನಿಯಂತ್ರಣ ತಪ್ಪಿ ವಾಹನವು ತಿರುವಿನಲ್ಲಿ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ.




