ಪತಿಯ ಕಿರುಕುಳ: ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪತ್ನಿ
ಬೆಂಗಳೂರು: ಹೆಬ್ಬಾಳದ ಕನಕ ನಗರದಲ್ಲಿ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯನ್ನು ಹೆಬ್ಬಾಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಹರ್ ಆಸ್ಮಾ (30) ಆತ್ಮಹತ್ಯೆ ಮಾಡಿಕೊಂಡವರು. ಇವರ ಪತಿ ಬಷೀರ್ ಉಲ್ಲಾ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ತಾಯಿ ಜಬೀನ್ ತಾಜ್, ಅಣ್ಣ ಅರ್ಷದ್ ಉಲ್ಲಾ, ಮಜರ್ ಖಾನ್, ತರ್ಬೆಜ್ ಖಾನ್, ಹರ್ಷಿಯಾ ಹಾಗೂ ನೌಷದ್ ವಿರುದ್ಧವೂ ಪ್ರಕರಣ ದಾಖಲಾಗಿದ್ದು ಅವರನ್ನೂ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.
ಯುವತಿಯ ಜತೆಗೆ ಬಷೀರ್ ಉಲ್ಲಾಗೆ ಸ್ನೇಹವಿದ್ದು, ಆತನ ಕಿರುಕುಳದಿಂದಲೇ ಆಸ್ಮಾ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಅವರ ಪೋಷಕರು ದೂರು ನೀಡಿದ್ದಾರೆ.





