June 13, 2026

ಪಿಎಫ್‌ಐ ಸ್ಥಾಪಕ ಅಧ್ಯಕ್ಷ ಈ. ಅಬೂಬಕರ್ ಆರೋಗ್ಯದಲ್ಲಿ ಏರುಪೇರು: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

0
image_editor_output_image728060867-1772840697667.jpg

ಹೊಸದಿಲ್ಲಿ: ಸುಮಾರು ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸ್ಥಾಪಕ ಅಧ್ಯಕ್ಷ ಎರಪ್ಪುಂಗಲ್ ಅಬೂಬಕರ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರದಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಓಸೊಫಾಗೋಫಾರಿಂಜಿಯಲ್ ಕಾರ್ಸಿನೋಮಾ ಶಸ್ತ್ರಚಿಕಿತ್ಸೆಯ ನಂತರ ದೀರ್ಘ ವಿಶ್ರಾಂತಿಯಲ್ಲಿದ್ದ ಹಿರಿಯ ಮುಸ್ಲಿಂ ನಾಯಕ ಅಬೂಬಕರ್ ಅವರನ್ನು 2022ರ ಸೆಪ್ಟೆಂಬರ್ 22ರಂದು ಮುಂಜಾನೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅವರ ಮನೆಯಿಂದ ಬಂಧಿಸಿತ್ತು.

ಅವರ ಆರೋಗ್ಯದ ಕುರಿತು ಮಾಹಿತಿ ನೀಡಿದ ಮಗಳು ಲೀನಾ ಥಬಾಸುಮ್, ಕಳೆದ ಎರಡು ದಿನಗಳಿಂದ ಅವರ ಸ್ಥಿತಿಯಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ಕುಟುಂಬದ ಪ್ರಕಾರ, ಅಬೂಬಕರ್ ಅವರು ಎದೆ ಸೋಂಕು ಹಾಗೂ ತೀವ್ರ ಕೆಮ್ಮಿನಿಂದ ಬಳಲುತ್ತಿದ್ದಾರೆ. ಜೊತೆಗೆ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತಗಳು ಕಂಡುಬರುತ್ತಿವೆ. ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟವೂ ಕುಸಿದಿದ್ದು, ಆರೋಗ್ಯದ ಬಗ್ಗೆ ಕುಟುಂಬದವರಲ್ಲಿ ಆತಂಕ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!