June 13, 2026

ಕರಾವಳಿ ಅಭಿವೃದ್ಧಿಗೆ ಮಹತ್ವ ನೀಡಿದ ರಾಜ್ಯ ಬಜೆಟ್: ಬಿ. ರಮಾನಾಥ ರೈ

0
image_editor_output_image454156982-1772839991575.jpg

ಮಂಗಳೂರು: ಕರ್ನಾಟಕ ಸರ್ಕಾರವು ಮಂಡಿಸಿದ ಇಂದಿನ ಬಜೆಟ್ ಜನಪರ ಮತ್ತು ಅಭಿವೃದ್ಧಿ ಪರವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವ ಬಿ. ರಮಾನಾಥ್ ರೈ ತಿಳಿಸಿದ್ದಾರೆ.

ಬಿಜೆಟ್‌ನಲ್ಲಿ ರೈತರು, ಮಹಿಳೆಯರು, ಯುವಕರು ಹಾಗೂ ಮಧ್ಯಮ ವರ್ಗದ ಜನರಿಗೆ ನೀಡಿದ ಯೋಜನೆಗಳು ಸ್ವಾಗತಾರ್ಹವಾಗಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಕರಾವಳಿ ಪ್ರದೇಶದ ಪ್ರವಾಸೋದ್ಯಮ, ಮೀನುಗಾರಿಕೆ, ಪೊಲೀಸ್ ಠಾಣೆಗಳ ಬಲವರ್ಧನೆ, ಕೃಷಿ, ಅರಣ್ಯ, ಆರೋಗ್ಯ, ಮುಜರಾಯಿ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ, ಹಾಗೂ ವಸತಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.

“ರಾಜ್ಯದ ಸಮಗ್ರ ಮತ್ತು ಕರಾವಳಿ ಅಭಿವೃದ್ಧಿಗೆ ಈ ಬಜೆಟ್ ಮಹತ್ವದ ಹೆಜ್ಜೆಯಾಗಿದ್ದು, ಎಲ್ಲಾ ವರ್ಗದ ಸಮುದಾಯದ ಕಲ್ಯಾಣಕ್ಕೆ ಗಮನಹರಿಸಲಾಗಿದೆ” ಎಂದು ಬಿ. ರಮಾನಾಥ ರೈ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!