April 24, 2026

ಬೆಳ್ತಂಗಡಿ: ಪಶ್ಚಿಮ ಬಂಗಾಳದ ನೋಂದಾಯಿತ ಬೈಕ್‌ಗೆ ನಕಲಿ ನಂಬರ್ ಪ್ಲೇಟ್: ಪ್ರಕರಣ ದಾಖಲು

0
image_editor_output_image-796586983-1772882411747.jpg

ಬೆಳ್ತಂಗಡಿ: ಪಶ್ಚಿಮ ಬಂಗಾಳದ ನೋಂದಾಯಿತ ಬೈಕ್‌ಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಸಂಚರಿಸುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಮಾರ್ಚ್5ರಂದು ಸಂತೆಕಟ್ಟೆ ಪ್ರದೇಶದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಇಲ್ಲದೆ CRT 9988 ನಂಬರ್ ಹೊಂದಿದ RX100 ಬೈಕ್‌ನಲ್ಲಿ ಬಂದ ಕಳಿಯ ಗ್ರಾಮದ ನವಾಜ್ (19) ಎಂಬ ಯುವಕನನ್ನು ಪೊಲೀಸರು ತಡೆದು ಪರಿಶೀಲಿಸಿದರು.

ಪರಿಶೀಲನೆಯ ವೇಳೆ ಬೈಕ್‌ನ ನಂಬರ್, ದಾಖಲೆಗಳು ಹಾಗೂ ಚಾಸಿಸ್–ಇಂಜಿನ್ ಸಂಖ್ಯೆಗಳು ಹೊಂದಿಕೆಯಾಗಿಲ್ಲ. ಹೆಚ್ಚಿನ ವಿಚಾರಣೆ ನಡೆಸಿದಾಗ ಬೈಕ್ ಮೂಲತಃ West Bengal ರಾಜ್ಯದ WB 26 B 2463 ಸಂಖ್ಯೆಗೆ ಸೇರಿದದ್ದು ಎಂದು ತಿಳಿದುಬಂದಿದೆ.

ಫಿಟ್ನೆಸ್ ಅವಧಿ ಮುಗಿದಿದ್ದರಿಂದ ಫೇಸ್‌ಬುಕ್ ಜಾಹೀರಾತಿನ ಮೂಲಕ ನಕಲಿ ನಂಬರ್ ಪ್ಲೇಟ್ ಮತ್ತು ದಾಖಲೆಗಳನ್ನು ಖರೀದಿಸಿ ಅಳವಡಿಸಿದ್ದಾಗಿ ಯುವಕ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಬೈಕ್ ಹಾಗೂ ಯುವಕನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!