April 24, 2026

ಫರಂಗಿಪೇಟೆ: ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ: ಅಂಚೆ ಇಲಾಖೆ ವಿರುದ್ಧ ದೂರು ದಾಖಲು

0
image_editor_output_image561460539-1772882565391.jpg

ಬಂಟ್ವಾಳ: ಫರಂಗಿಪೇಟೆ ಸಮೀಪದ 10ನೇ ಮೈಲ್‌ಕಲ್ಲು ಬಳಿ ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಂಚೆ ಇಲಾಖೆ ವಿರುದ್ದ ಕಂದಾಯ ಇಲಾಖೆ ಪೊಲೀಸರಿಗೆ ದೂರು ನೀಡಿದೆ.

ಬಂಟ್ವಾಳದ ಪುದು ಗ್ರಾಮದ ಸುಜೀರ್ ಬಳಿ ನೇತ್ರಾವತಿ ನದಿ ತೀರದಲ್ಲಿ ಮಂಗಳವಾರ ಸಂಜೆ ಸ್ಥಳೀಯ ನಿವಾಸಿಗಳ 2013 ರಿಂದ 2023 ರ ವರೆಗಿನ ಸುಮಾರು ನೂರಾರು ಮೂಲ ಆಧಾರ್ ಕಾರ್ಡ್ ಗಳು ನದಿತೀರದಲ್ಲಿ ಸ್ಥಳೀಯರಿಗೆ ಪತ್ತೆಯಾಗಿತ್ತು. ಆಧಾರ್ ಕಾರ್ಡ್ ಪ್ರತಿಗಳಲ್ಲಿ ಫರಂಗಿಪೇಟೆ ಅಂಚೆ ಕಚೇರಿಯ ಸೀಲ್ ಪತ್ತೆಯಾಗಿದೆಯೆನ್ನಲಾಗಿದೆ.

ಮಾರ್ಚ್ 5ರಂದು ಅಂಚೆ ಇಲಾಖೆಯ ಸಹಾಯಕ ಅಂಚೆ ಅಧೀಕ್ಷರು ಹಾಗೂ ನಿರೀಕ್ಷಕರು ಪುದು ಗ್ರಾ.ಪಂ. ಹಾಗೂ ಕಾರ್ಡ್‌ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ್ದು, ಆದರೆ ಅವರಿಗೆ ಕಾರ್ಡ್‌ ಸಿಕ್ಕಿರಲಿಲ್ಲ. ಶುಕ್ರವಾರ ಅವರಿಗೆ ಪಂ.ನವರು ಒಂದಷ್ಟು ಕಾರ್ಡ್‌ಗಳನ್ನು ಅಂಚೆ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಪತ್ತೆಯಾದ ಆಧಾರ್‌ ಕಾರ್ಡ್‌ಗಳಲ್ಲಿ ಪುದು ಅಂಚೆ ಕಚೇರಿಯ ಸೀಲ್‌ ಇರುವುದರಿಂದ ಗ್ರಾಮ ಸ್ಥರಿಗೆ ಹಂಚದೇ ಇರುವ ಅಂಚೆ ಇಲಾಖೆಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!