ನವದೆಹಲಿ: ಸಂಸತ್ ನ ಉಭಯ ಸದನಗಳು ಅಂಗೀಕರಿಸಿದ್ದ ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಕಿತ ಹಾಕಿದ್ದಾರೆ.
ಇದರೊಂದಿಗೆ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬರಲಿದೆ. ಜಂಟಿ ಸಂಸದೀಯ ಸಮಿತಿ ರಚನೆ ಸೇರಿದಂತೆ 6 ತಿಂಗಳುಗಳ ವಿಸ್ತೃತ ಚರ್ಚೆ ಹಾಗೂ ಸಮಾಲೋಚನೆಗಳ ಬಳಿಕ ಕಾಯ್ದೆಯನ್ನು ಸಂಸತ್ ನಲ್ಲಿ ಮಂಡಿಸಲಾಗಿತ್ತು.