ವಿದ್ಯಾರ್ಥಿನಿ ಸುದೀಕ್ಷಾ ಕೊನಂಕಿ ನಾಪತ್ತೆ

ವಾಷಿಂಗ್ಟನ್: ಭಾರತ ಮೂಲದ ವಿದ್ಯಾರ್ಥಿನಿ ಸುದ್ದಿಕ್ಷಾ ಕೊನಂಕಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಸ್ನೇಹಿತರ ಜೊತೆ ಇರುವ ವಿಡಿಯೊ ಲಭ್ಯವಾಗಿದೆ.
ಡೊಮಿನಿಕನ್ ರಿಪಬ್ಲಿಕ್ ಕಡಲ ತೀರದಲ್ಲಿರುವ ಕ್ಲಬ್‌ನಲ್ಲಿ ಸುದಿಕ್ಷಾ ಕೊನಂಕಿ ಗೆಳೆಯರ ಜೊತೆ ಇರುವ ವಿಡಿಯೊ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಸುದಿಕ್ಷಾ ಕೊನಂಕಿ ವ್ಯಾಸಂಗ ಮಾಡುತ್ತಿದ್ದರು. ಮಾರ್ಚ್ 6ರಂದು ರಜೆ ನಿಮಿತ್ತ ಐವರು ಗೆಳೆಯರ ಜೊತೆ ಕಡಲ ತೀರದ ಡೊಮಿನಿಕನ್ ರಿಪಬ್ಲಿಕ್‌ಗೆ ಆಗಮಿಸಿದ್ದರು. ಅಂದು ರಾತ್ರಿ ಅವರು ನಾಪತ್ತೆಯಾಗಿದ್ದರು.