December 20, 2025

ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌: ಭಾರತದ ಶ್ರೀಕಾಂತ್ ಕಿಡಂಬಿ ಫೈನಲ್‌ನಲ್ಲಿ ಸೋಲು, ಬೆಳ್ಳಿಗೆ ತೃಪ್ತಿ

0
download.jpeg

ಸ್ಪೇನ್: ವಿಶ್ವ ಚಾಂಪಿಯನ್‌ಶಿಪ್ ಟೈಟಲ್‌ ಮುಡಿಗೇರಿಸಿಕೊಳ್ಳುವ ಸುವರ್ಣಾವಕಾಶವನ್ನು ಭಾರತದ ಕಿಡಂಬಿ ಶ್ರೀಕಾಂತ್ ಅವರು ಸ್ವಲ್ಪದರಲ್ಲಿ ಕಳೆದುಕೊಂಡಿದ್ದಾರೆ.

ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ 22ನೇ ಶ್ರೇಯಾಂಕದ ಆಟಗಾರ ಸಿಂಗಾಪುರದ ಲೊ ಕಿಯೊನ್ ಯೊ ಎದುರು 15-21, 20-22 ನೇರ ಸೆಟ್ ಗಳಿಂದ ಕಿಡಂಬಿ ಪರಾಭವಗೊಂಡರು.

42 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 15ನೇ ಶ್ರೇಯಾಂಕದ ಶ್ರೀಕಾಂತ್ ಭಾರಿ ಹೋರಾಟ ನಡೆಸಿದರಾದರೂ ನಿರ್ಣಾಯಕ ಕ್ಷಣಗಳಲ್ಲಿ ಎದುರಾಳಿ ಮೇಲುಗೈ ಸಾಧಿಸಿದರು. ಇದರಿಂದ ಶ್ರೀಕಾಂತ್ ರಜತ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ವೃತ್ತಿ ಜೀವನದ ಮೊದಲ ಪ್ರಶಸ್ತಿಯನ್ನು ಕಿಯೋನ್ ಗೆದ್ದುಕೊಂಡರು. ಈ ಸಾಧನೆ ಮಾಡಿದ ಮೊದಲ ಸಿಂಗಾಪುರದ ಶಟ್ಲರ್ ಎಂಬ ಇತಿಹಾಸ ನಿರ್ಮಿಸಿದರು.

ಆದರೆ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದಿಂದ ಚಿನ್ನ ಗೆದ್ದ ಏಕೈಕ ಭಾರತೀಯ ಆಟಗಾರ್ತಿ ಪಿವಿ ಸಿಂಧು. ಈ ಟೂರ್ನಿಯಲ್ಲಿ ಸತತ ಎರಡು ಬಾರಿ ಬೆಳ್ಳಿ ಗೆದ್ದಿರುವ ಸಿಂಧು, 2019ರಲ್ಲಿ ವಿಜೇತೆಯಾಗಿ ಇತಿಹಾಸ ನಿರ್ಮಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!