ಉಳ್ಳಾಲ: ಖಾಸಗಿ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ
ಉಳ್ಳಾಲ: ಖಾಸಗಿ ವಸತಿ ಸಂಕೀರ್ಣದಲ್ಲಿದ್ದ ನಾಟೆಕಲ್ ಖಾಸಗಿ ಕಾಲೇಜೊಂದರ ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ ನಡೆಸಿಕೊಂಡ ಘಟನೆ ಕುತ್ತಾರು ಬಳಿ ನಡೆದಿದೆ.
ಬೀದರ್ ಆನಂದನಗರ ನಿವಾಸಿ ವೈಶಾಲಿ ಗಾಯಕವಾಡ್(25) ಆತ್ಮಹತ್ಯೆ ಗೈದ ವಿದ್ಯಾರ್ಥಿನಿ.
ನಾಟೆಕಲ್ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಮುಗಿಸಿ ಅಲ್ಲೇ ಇಂಟನ್೯ಶಿಪ್ ನಡೆಸುತ್ತಿದ್ದರು. ಕುತ್ತಾರು ಸಿಲಿಕೋನಿಯಾ ಅಪಾಟ್೯ಮೆಂಟಿನ ರೂಮಿನಲ್ಲಿ ಫ್ಯಾ ನಿಗೆ ನೇಣುಬಿಗಿದು ಆತ್ಮಹತ್ಯೆ ನಡೆಸಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈಕೆ ತನ್ನ ಎಂಬಿಬಿಎಸ್ ಕ್ಲಾಸ್ ಮೇಟ್ ಆಗಿದ್ದ ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿವಾಸಿ ಸುಜೀಶ್ ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.
ಸುಜೀಶ್ ಕೂಡಾ ಕುತ್ತಾರಿನ ಅದೇ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ. ಆದರೆ ಇವರ ನಡುವೆ ಯಾವುದೋ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಇಂದು ವೈಶಾಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವರಿಬ್ಬರು ಕೂಡ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿದ್ದರು.
ಪ್ರಕರಣ ಸಂಬಂಧಿಸಿ ಪೊಲೀಸರು ಪ್ರಿಯಕರ ಸುಜೀಶ್ ನನ್ನು ವಶಕ್ಕೆ ಪಡೆದಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





